Sunday, January 18, 2009

ಕುವೆಂಪು ಕುರಿತ ನನ್ನ ಲೇಖನ

ಕನ್ನಡ-ಕರ್ನಾಟಕ: ಕುವೆಂಪು ಮೀಮಾಂಸೆ
ತಾರಕೆಶ್ವರ್ ವಿ.ಬಿ.

ಕುವೆಂಪುರವರ ಕನ್ನಡ-ಕರ್ನಾಟಕ ಮೀಮಾಂಸೆಯನ್ನು ಅವರ ಬರಹಗಳಲ್ಲಿ ಗುರುತಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ. ಕನ್ನಡ ಎಂಬುದನ್ನು ಎರಡೂ ಅರ್ಥದಲ್ಲಿಯೂ ಇಲ್ಲಿ ನೋಡಲಾಗಿದೆ. ಮೊದಲನೆಯದು, ಒಂದು ಭಾಷೆಯನ್ನು ನಿರ್ದೇಶಿಸುವ ಸಂಕೇತವಾಗಿ ನೋಡಿ, ಅದರ ಸ್ಥಿತಿಗತಿಗಳನ್ನು ಕುರಿತ ಕುವೆಂಪುರವರ ಮೀಮಾಂಸೆಯನ್ನು ಗುರುತಿಸಲಾಗಿದೆ. ಎರಡನೆಯದಾಗಿ, ಒಂದು ಭಾಷಿಕ ಸಮುದಾಯದ ಗುರುತಾಗಿಯೂ ಅದನ್ನು ನೋಡಿ, ಕುವೆಂಪುರವರ ಮೀಮಾಂಸೆಯನ್ನು ಅರಿಯುವ ಪ್ರಯತ್ನವನ್ನು ಮಾಡಲಾಗಿದೆ. ಹಾಗೆಯೇ ಕರ್ನಾಟಕ ಎಂಬುದನ್ನು ಕನ್ನಡ ಗುರುತು ತನ್ನ ವಲಯವೆಂದು ಗುರುತಿಸುವ ಭೌಗೋಳಿಕ ಪ್ರದೇಶವಾಗಿ ನೋಡಲಾಗಿದೆ ಮತ್ತು ಅದನ್ನು ಕುರಿತ ಕುವೆಂಪುರವರ ವಿಚಾರಗಳನ್ನು ಪರಿಶೀಲಿಸಲಾಗಿದೆ. ಮೊದಲಿಗೆ ಕುವೆಂಪುರವರ ಮೀಮಾಂಸೆಯನ್ನು ಗುರುತಿಸಲು ಅಗತ್ಯವಾದ ಸೈದ್ಧಾಂತಿಕ ಚೌಕಟ್ಟು ಮತ್ತು ಸಂದರ್ಭವನ್ನು ವಿವರಿಸಿ, ನಂತರ ಕನ್ನಡ-ಕರ್ನಾಟಕ ಕುರಿತ ಅವರ ಮೀಮಾಂಸೆಯನ್ನು ಗುರುತಿಸಿ, ಕೊನೆಯಲ್ಲಿ ಕೆಲವು ತಾತ್ಫೂರ್ತಿಕವಾದ ನನ್ನ ನಿಲುವುಗಳನ್ನು ಮಂಡಿಸಿದ್ದೇನೆ. ಇದು ಸ್ಥೂಲವಾಗಿ ಈ ಲೇಖನದ ಸಂರಚನೆ.
೧ಭಾರತದಲ್ಲಿ ಪ್ರತಿ ೮ ಕಿ.ಮೀ.ಗೆ ಭಾಷೆ ಬದಲಾಗುತ್ತದೆಂದು ಹೇಳಲಾಗುತ್ತದೆ. ಭಾರತವು ಬಹುಭಾಷೆಗಳ ಪ್ರದೇಶವಾಗಿದ್ದು ಇಲ್ಲಿನ ಬಹುತೇಕರು ಬಹುಭಾಷೆಗಳನ್ನು ಸುಲಲಿತವಾಗಿ ದಿನನಿತ್ಯದ ವ್ಯವಹಾರಗಳಲ್ಲಿ ಬಳಸುತ್ತಾರೆ. ಇಂಧ ಒಂದು ಪರಿಸ್ಥಿತಿಯಲ್ಲಿ ಮೃತ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆ ಬಹುತೇಕ ಲಿಖಿತ ಭಾಷೆಯ ಸ್ಥಾನವನ್ನು ತನ್ನ ಬದಲಾವಣಾರಾಹಿತ್ಯ ಗುಣದಿಂದಲೇ ಪಡೆದುಕೊಂಡಿದ್ದನ್ನು ನಾವು ಕಾಣಬಹುದು. ಕನ್ನಡದಂಥಹ ಭಾಷೆಗಳೂ ಕ್ರಿ.ಶ. ೫ನೇ ಶತಮಾನದಿಂದ ೧೨ನೇ ಶತಮಾನದ ಅವಧಿಯಲ್ಲಿ (ಕೆಲವು ಭಾಷೆಗಳು ಅದಕ್ಕಾಗಿ ೧೭ನೇ ಶತಮಾನದವರೆಗೆ ಕಾದವು), ಲಿಖಿತ ಭಾಷಯ ಸ್ಥಾನವನ್ನು ಪಡೆದುಕೊಂಡವು. ಕಾವ್ಯಕ್ಕೆ ಸೂಕ್ತವೆಂದು ಭಾವಿಸಲಾದ ಒಂದು ಪ್ರಮಾಣ ಕಾವ್ಯಭಾಷೆಯ ಹುಡುಕಾಟವನ್ನು ಈ ಸಂದರ್ಭದಲ್ಲಿ ಕಾಣಬಹುದು. ಆದರೆ ಈ ಪ್ರಮಾಣ ಕಾವ್ಯಭಾಷೆ, ಲಿಖಿತ ಸಾಹಿತ್ಯದಲ್ಲಿ ಮತ್ತು ಧಾರ್ಮಿಕ ಸಾಹಿತ್ಯದಲ್ಲಿ ಮಾತ್ರ ಬಳಕೆಯಾಗುತ್ತಿದ್ದದ್ದರಿಂದ ಅದರ ಬಳಕೆಯ ಆವರಣ ಮತ್ತು ಪರಿಣಾಮಗಳು ಅಂಥ ಕ್ರಾಂತಿಕಾರಿಯಾಗೇನೂ ಇರಲಿಲ್ಲ. ಮೌಖಿಕವಾಗಿ ರಚಿತವಾಗಿದ್ದ ಮತ-ಸಾಹಿತ್ಯದ ಭಾಷೆ, ಅವುಗಳ ಪ್ರಸಾರ ಇವುಗಳ ವಿಷಯ ಬೇರೆಯಾಗಿತ್ತು. ಇವೆರೆಡರುಗಳ ನಡುವೆ ಕೊಳು-ಕೊಡೆಗಳೂ ನಡೆಯುತ್ತಿತ್ತು, ಅಲ್ಲದೆ ಮೌಖಿಕವಾದದ್ದು ಗ್ರಂಥಸ್ಥವೂ ಆಗಿರುವುದನ್ನು ಮತ್ತು ಗ್ರಂಥಸ್ಥವಾದದ್ದು ತನ್ನದೇ ಆದ ಮೌಖಿಕ ಪ್ರಸಾರ ಕಲೆಯನ್ನು ರೂಪಿಸಿಕೊಂಡದ್ದನ್ನೂ ನಾವು ಕಾಣಬಹುದು.
ಇಂಧ ಪರಿಸ್ಥಿತಿ ಮುದ್ರಣ ಯಂತ್ರದ ಆಗಮನದೊಂದಿಗೆ ಬಹಳ ಆಳವಾಗಿ ಬದಲಾಯಿತು. ಲಿಪಿಯು ಮುದ್ರಣ ಯಂತ್ರದ ಅಗತ್ಯಗಳಿಗನುಸಾರವಾಗಿ ಸ್ಪಷ್ಟವಾದ ಬದಲಾಗಲಾರದ ಆಕಾರವನ್ನು ಪಡೆಯಿತು. ಹಾಗೆಯೇ ನಿಧಾನವಾಗಿ, ಕನ್ನಡದ ಹಲವಾರು ಪ್ರಬೇಧಗಳಲ್ಲಿ ಒಂದು ಪ್ರಬೇಧವು ಪ್ರಮಾಣ ಭಾಷೆಯಾಗಿ ರೂಪುಪಡೆಯತೊಡಗಿ, ಇತರ ಪ್ರಬೇಧಗಳು ಉಪಭಾಷೆಗಳಾಗಿ ಕರೆಯಲ್ಪಡತೊಡಗಿದವು. ಬೈಬಲ್‌ನ ಪ್ರಚಾರದ ಹಿನ್ನಲೆಯಲ್ಲಿ ಇದು ಆರಂಭವಾದರೂ, ನಂತರ ಇತರ ಅಗತ್ಯಗಳಿಂದಾಗಿ ಗತಿ ಪಡೆದುಕೊಂಡಿತು. ವಸಾಹತುಶಾಹಿ ಪ್ರಭುತ್ವದ ಅಗತ್ಯವಾಗಿದ್ದ, ಆಳುವವರು ಮತ್ತು ಆಳಿಸಿಕೊಳ್ಳುವವರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಲು ಅವಶ್ಯಕವಾಗಿದ್ದ, ಒಂದು ವರ್ಗವನ್ನು ರೂಪಿಸಲು ಹೊಸ ಶಿಕ್ಷಣ ಪದ್ಧತಿ ಆರಂಭವಾಯಿತು. ಈ ಶಿಕ್ಷಣವು ಸಾರ್ವತ್ರಿಕ ಲಕ್ಷಣವನ್ನು ಹೊಂದಿದ್ದರಿಂದ, ಹೊಸದಾದ ಶಿಕ್ಷಿತವರ್ಗದ ಉದಯವನ್ನು ಈ ಸಂದರ್ಭದಲ್ಲಿ ಕಾಣಬಹುದು. ಶಿಕ್ಷಣದ ಅಗತ್ಯಗಳನ್ನು ಪೂರೈಸಲೂ, ಭಾಷೆ ಪ್ರಮಾಣ- ಬದ್ಧಗೊಳ್ಳಬೇಕಾಯಿತು. ಶಿಕ್ಷಣದ ಪಠ್ಯಕ್ರಮದಲ್ಲಿ ನಿಯಮಿಸಲು ತರಗತಿಯಲ್ಲಿ ಪಾಠಯೋಗ್ಯವಾದ ಕವನಗಳ ರಚನೆ, ಭಾಷಾಂತರ ಆರಂಭಗೊಂಡವು. ಶಿಕ್ಷಣ ಪಡೆದ ಹೊಸವರ್ಗವು ಬಹುತೇಕ ಸರಕಾರಿ ಹುದ್ದೆಗಳಲ್ಲಿ ಸ್ಥಾನ ಪಡೆಯಿತು. ಈ ವರ್ಗದ ಅಗತ್ಯಗಳಿಗೆ ಅನುಗುಣವಾಗಿ ಕುಟುಂಬವು ಮರುರೂಪಿತಗೊಂಡಿತು. ಬಿಡುವು ಹೊಂದಿರುವ, ಆರಾಮವಾಗಿ ಓದಲು ಸಾಧ್ಯವಾಗಿದ್ದ ವರ್ಗ ಇದು. ಇಂಗ್ಲಿಶ್ ಸಾಹಿತ್ಯವನ್ನು ಓದುವ ಅಭಿರುಚಿ ರೂಪುಗೊಂಡಿತು. ಈ ವರ್ಗದ ಅಗತ್ಯಗಳನ್ನು ಪೂರೈಸಲು, ಅದೇ ಮಾದರಿಯ ಕನ್ನಡ ರಚನೆಗಳೂ ಆರಂಭಗೊಂಡವು. ಪುಸ್ತಕ ಪ್ರಕಟಣೆ, ದಿನಪತ್ರಿಕೆಗಳ ಪ್ರಕಟನೆ, ಇತ್ಯಾದಿಗಳು ಆರಂಭಗೊಂಡವು.
ವಸಾಹತುಶಾಹಿಯೊಂದಿಗೆ ಆಗಮಿಸಿದ ಆಧುನಿಕತೆ ಇಲ್ಲಿನ ಇದುವರೆಗಿನ ಯಾಜಮಾನ್ಯಗಳನ್ನು (ಮುಖ್ಯವಾಗಿ ಜಾತಿ ವ್ಯವಸ್ಥೆ ಮತ್ತು ಊಳಿಗಮಾನ್ಯ ಪದ್ಧತಿ) ಕೊಂಚವಾದರು ಅಲುಗಾಡಿಸಿದ್ದರಿಂದ, ಹೊಸರೀತಿಯ ತಿಕ್ಕಾಟಗಳು, ಸಂಚಲನಗಳೂ ರೂಪುಗೊಂಡವು. ಆದರೆ ಇದೆಲ್ಲಕ್ಕಿಂತ ಮುಖ್ಯವಾದದ್ದು ಭಾಷಿಕ ಗುರುತುಗಳ ಉಗಮ. ಬೆನೆಡಿಕ್ಟ್ ಆಂಡರ್‌ಸನ್ ಹೇಳುವ ಪ್ರಕಾರ ಇದರಿಂದಾಗಿ ಕಲ್ಪಿತ ಸಮುದಾಯಗಳು ಉಗಮಗೊಂಡವು (ಂಟಿಜeಡಿsoಟಿ, ೧೯೮೧). ಈ ಕಲ್ಪಿತ ಸಮುದಾಯಗಳು ಭಾಷೆ ಆಧಾರಿತವಾಗಿದ್ದವು.
ಇವು ಏಕೆ ಕಲ್ಪಿತ ಸಮುದಾಯಗಳೆಂದರೆ, ಇದುವರೆವಿಗೂ ಒಮ್ಮೆಯೂ ಮುಖ ನೋಡದ, ಭೇಟಿಯಾಗಿರದ ವ್ಯಕ್ತಿಗಳು ಮತು ನಾವು ಒಂದು ಎನ್ನುವ ಭಾವನೆಯನ್ನು ನಮ್ಮಲ್ಲಿ ಮೂಡಿಸುತ್ತವೆ. ಈ ರೀತಿಯ ಸಮುದಾಯ, ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುವಂತೆ ಮಾಡುತ್ತದೆ. ಆ ಭಾಷೆಯನ್ನಾಡದ ಜನರನ್ನು ಅನ್ಯ ಎಂದು ನೋಡಲು ಪ್ರೇರೇಪಿಸುತ್ತದೆ. ಭಾಷೆಯ ಆಧಾರದ ಮೇಲೆ, ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು ಗುರುತಿಸಿ, ಇದು ತನಗೆ ಸೇರಿದ್ದು, ಇದರ ಆಡಳಿತ ನಿರ್ವಹಣೆ ತನ್ನದು ಎಂದು ಸಾರುತ್ತದೆ. ಈ ಒಂದು ಭೌಗೋಳಿಕ ಪ್ರದೇಶವು ಪ್ರಾಚೀನವಾದದ್ದೆಂದು, ಮತ್ತು ಈ ಸಮುದಾಯ ಒಂದೇ ಭಾಷೆಯನ್ನಲ್ಲದೆ, ಒಂದೇ ಸಂಸ್ಸೃತಿಯನ್ನು (ಅದೂ ಉನ್ನತವಾದದ್ದು, ಯಾರಿಗೇನೂ ಕಡಿಮೆ ಇಲ್ಲದ್ದು) ಶತಮಾನಗಳಿಂದ ಉಳಿಸಿ, ಬೆಳೆಸಿಕೊಂಡು ಬಂದಿದೆ; ಆದ್ದರಿಂದ, ಅದು ಶ್ರೇಷ್ಟ ಎಂದು ಸಾಧಿಸುತ್ತದೆ. ಈ ಸಂದರ್ಭದಲ್ಲೇ ಅದು ಈ ಭೌಗೋಳಿಕ ಪ್ರದೇಶದ (ಸಂಸ್ಕೃತಿ), ಈ ಭಾಷೆಯ, ಅದರ ಸಾಹಿತ್ಯದ ಚರಿತ್ರೆಯನ್ನು ಅತ್ಯಂತ ವೈಭವೀಕರಿಸಿ ರೂಪಿಸಿಕೊಳ್ಳುತ್ತದೆ. ಪ್ರಸ್ತುತದ ಅದರ ಸ್ಥಿತಿಯನ್ನು ಅವನತಿ ಎಂದು ಚಿತ್ರಿಸಿ, ಅದನ್ನು ಮತ್ತಷ್ಟು ಪ್ರಗತಿಯ ಹಾದಿಯತ್ತ ಕೊಂಡೆಯ್ಯಲು ಸದಸ್ಯರನ್ನು ಪ್ರೇರೇಪಿಸುತ್ತದೆ. ಈ ಕಲ್ಪಿತ ಸಮುದಾಯಗಳೇ, ನಾವೆಲ್ಲರು ಇಂದು ಸುಲಭವಾಗಿ ಗುರುತಿಸುವ ರಾಷ್ಟ್ರಗಳೆಂದು ಆಂಡರ್‌ಸನ್ ಹೇಳುತ್ತಾನೆ.
ಆದರೆ, ಆಂಡರ್‌ಸನ್‌ನ ಈ ಮಾತು ಯೂರೋಪಿನ ಸಂದರ್ಭದಲ್ಲಿ ಸರಿ. ಅಲ್ಲಿ ಭಾಷಿಕ ಸಮುದಾಯಗಳೇ ಆಧುನಿಕ ರಾಷ್ಟ್ರಗಳಾಗಿ ರೂಪುಗೊಂಡವು. ಆದರೆ ಭಾರತವು ಒಂದು ರಾಷ್ಟ್ರವಾಗಿ (ಅಂದರೆ ಕಲ್ಪಿತ-ಸಮುದಾಯವಾಗಿ) ರೂಪುತಳೆದದ್ದು ಆಂಡರ್‌ಸನ್ ಹೇಳುವಂತೆ ಭಾಷೆಯ ಆಧಾರದ ಮೇಲೆ ಅಲ್ಲ. ವಸಾಹತೀಕರಣಕ್ಕೆ ಒಳಗಾಗಿದ್ದ ಪ್ರದೇಶಗಳಲ್ಲಿ (ಏಷಿಯಾ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ) ರಾಷ್ಟ್ರಗಳು ರೂಪುಗೊಂಡದ್ದು, ಪಾರ್ಥ ಚಟರ್ಜಿಯವರ ಪ್ರಕಾರ, ವಸಾಹತು ವಿರೋಧದಲ್ಲಿ (ನೋಡಿ, ಅhಚಿಣಣeಡಿರಿee, ೧೯೮೫ ಮತ್ತು ೧೯೯೩). ಇದರರ್ಥ ಈ ಹಿಂದೆ ವಿವರಿಸಿದಂತೆ, ಭಾಷೆ ಆಧಾರಿತ ಗುರುತುಗಳು ಭಾರತದಲ್ಲಿ ಹುಟ್ಟಲಿಲ್ಲ ಎಂದಲ್ಲ. ಆದರೆ ಈ ಭಾಷೆ ಆಧಾರಿತ ಗುರುತುಗಳು, ರಾಷ್ಟ್ರೀಯ ಕಲ್ಪಿತ ಸಮುದಾಯಗಳಾಗಿ ರೂಪುಗೊಳ್ಳಲಿಲ್ಲ. ವಸಾಹತು ಆಳ್ವಿಕೆಗೆ ಮತ್ತು ಆ ಮೂಲಕ ಆಧುನಿಕತೆಗೆ ತೆರೆದುಕೊಂಡ ಬೆಂಗಾಳದಲ್ಲಿ ಮೊದಲು ರೂಪುಗೊಂಡದ್ದೇ ಭಾಷಿಕ ಗುರುತು ಎಂದು ಅದನ್ನು ಕುರಿತು ಅಧ್ಯಯನ ಮಾಡಿರುವ ಸುದೀಪ್ತ ಕವಿರಾಜ್ ಮುಂತಾದವರು ವಿವರಿಸುತ್ತಾರೆ. ಆದರೆ ಅವರ ಅಧ್ಯಯನದ ಪ್ರಕಾರ, ವಸಾಹತುವನ್ನು ವಿರೋಧಿಸಲು, ಕೇವಲ ಬಂಗಾಳಿ ಸಮುದಾಯದ ಕಲ್ಪಿಸುವಿಕೆ ಸಾಲದು ಎಂದಾಗಿ, ಅವರು ಅದನ್ನು ವಿಸ್ತರಿಸಿ ಭಾರತೀಯ ಸಮುದಾಯವಾಗಿ ಕಲ್ಪಿಸಿಕೊಂಡರು ಎನ್ನುತ್ತಾರೆ. ಅಲ್ಲಿ ಭಾಷಿಕ ಗುರುತಾದ ಬೆಂಗಾಳಿ ಮತ್ತು ಭಾರತೀಯ ಎನ್ನುವ ಗುರುತುಗಳು ಅಭಿನ್ನವಾಗೇ ಬೆಳವಣಿಗೆಯಾಗುತ್ತ ಭಾರತ ಎಂಬ ರಾಷ್ಟ್ರ ಸಮುದಾಯದ ಹುಟ್ಟುವಿಕೆಗೆ ಕಾರಣವಾಗಿದೆ (ಏಚಿviಡಿಚಿರಿ, ೧೯೯೮). ಆದರೆ ಈ ವಿವರಣೆ ಕನ್ನಡ ಮತ್ತು ಭಾರತ ಎಂಬ ಎರಡು ಗುರುತುಗಳ ನಡುವಿನ ಸಂಬಂಧದ ವಿವರಣೆಗೆ ಹೊಂದುವುದಿಲ್ಲ ಎಂದು ನಾನು ಮತ್ತೊಂದೆಡೆ ವಾದಿಸಿದ್ದೇನೆ. ಇಲ್ಲಿ, ಎರಡು ಬೇರೆ ಬೇರೆಯಾಗಿಯೇ ಬೆಳವಣಿಗೆ ಹೊಂದಿದವು, ನಂತರ ಅವುಗಳನ್ನು ಪರಸ್ಪರ ವಿರೋಧವಲ್ಲದ ಎರಡು ಗುರುತು(ಸಮುದಾಯ)ಗಳಾಗಿ ಸಂಬಂಧ ಕಲ್ಪಿಸುವ ಅವಶ್ಯಕತೆ ಬಿದ್ದಿತು ಎಂಬುದು ನನ್ನ ವಾದ (ನೋಡಿ: ಖಿhಚಿಡಿಚಿಞeshತಿಚಿಡಿ, ೨೦೦೨). ಇದನ್ನು ಕುವೆಂಪುರವರ ಕವನಗಳಲ್ಲಿ ಸ್ಪಷ್ಟವಾಗಿ ಕಾಣಬಹುದು, ಆದ್ದರಿಂದ ಈ ಸೈದ್ಧಾಂತಿಕ ಚೌಕಟ್ಟಿನ ಹಿನ್ನಲೆಯಲ್ಲಿ ನಾವೀಗ ಕುವೆಂಪುರವರ ವಿಚಾರಗಳನ್ನು ಪರಿಶೀಲಿಸಬಹುದು.
೨ಕುವೆಂಪುರವರ ಬರವಣಿಗೆ ಇಂಗ್ಲಿಶ್‌ನಲ್ಲಿ ಆರಂಭವಾಗಿರುವುದನ್ನು ನಾವು ನೋಡಬಹುದು. ಅವರ ಪ್ರಥಮ ಕವನ ಸಂಕಲನ ಃegiಟಿeಡಿs ಒuse: ಃಚಿಟಟಚಿಜs, ಆesಛಿಡಿiಠಿಣive Poems ಚಿಟಿಜ Soಟಿಟಿeಣs (೧೯೨೨) ಪ್ರಕಟವಾದಾಗ ಅವರ ವಯಸ್ಸು ಕೇವಲ ೧೮ ವರ್ಷ. ಜೆ.ಎಚ್.ಕಸಿನ್ಸ ಎಂಬ ಐರಿಷ್ ಕವಿಗೆ ಅವರು ತನ್ನ ಕವನಗಳನ್ನು ತೋರಿಸಿದಾಗ, ಆತ ಕನ್ನಡದಲ್ಲಿ ಬರೆಯಿರಿ ಎಂದು ಅವರಿಗೆ ಉಪದೇಶಿಸಿದ ವಿಷಯ ಈಗಾಗಲೇ ಪ್ರಸಿದ್ದವಾಗಿರುವುದರಿಂದ ಅದನ್ನು ವಿವರಿಸುವುದಿಲ್ಲ (ನೋಡಿ, ಕುವೆಂಪು, ೨೦೦೪ ಬಿ: ೨೨೨-೨೨೩). ಆದರೆ ಆತನ ಉಪದೇಶ ಅವರ ಮೇಲೆ ಅಂಥಹಾ ಪರಿಣಾಮವನ್ನೇನೂ ಕೂಡಲೇ ಬೀರಲಿಲ್ಲ. ಅವರು ೧೯೨೪ರ ಸುಮಾರಿಗಷ್ಟೇ ಕನ್ನಡದಲ್ಲಿ ಕವನ ರಚನೆಗೆ ಮುಂದಾದದ್ದು. ಅವರ ಇಂಗ್ಲಿಶ್ ಸಂಗ್ರಹದಲ್ಲಿ ಏಳು ಕವನಗಳಿವೆ, ಅವುಗಳಲ್ಲಿ ಅವರೆ ಹೇಳಿಕೊಂಡಿರುವಂತೆ ಕೆಲವು ಮಿಲ್ಟನ್‌ನ ಅನುಕರಣೆಗಳು. ವಸಾಹತು ಸಂದರ್ಭದಲ್ಲಿನ ಬಹುತೇಕ ಭಾರತೀಯ ಸಾಹಿತಿಗಳು ಅವರ ಮನೆ/ಪ್ರದೇಶದ ಭಾಷೆಯ ಬದಲಿಗೆ, ಶಾಲೆಯಲ್ಲಿ ಕಲಿತ ಭಾಷೆಯಲ್ಲಿ ಬರವಣಿಗೆ ಆರಂಭಮಾಡಿರುವುದು ಬಹುತೇಕ ಸಾಮಾನ್ಯ ಸಂಗತಿ. ಬಂಗಾಳದ ಮೈಖೆಲ್ ಮಧುಸೂಧನ ದತ್ತ್, ಬಂಕಿಮಚಂದ್ರ ಚಟರ್ಜಿ ಇವರುಗಳೂ ಸಹ ಮೊದಲಿಗೆ ತಮ್ಮ ಬರವಣಿಗೆ ಆರಂಭಿಸಿದ್ದು ಇಂಗ್ಲಿಶ್‌ನಲ್ಲೇ. ತಾವು ಶಾಲೆ ಕಾಲೇಜಿನಲ್ಲಿ ಓದಿದ, ಶ್ರೇಷ್ಟ ಎಂದು ಉಣಬಡಿಸಲಾಗಿದ್ದ ಸಾಹಿತ್ಯವನ್ನು ನಾವೂ ಕರಗತ ಮಾಡಿಕೊಳ್ಳಬೇಕು ಎಂಬ ಹಂಬಲ ಮತ್ತು ಯಜಮಾನನ ಭಾಷೆಯನ್ನು ಅವರಷ್ಟೇ ಲೀಲಾಜಾಲವಾಗಿ ನಾವು ಬಳಸಬಲ್ಲೆವೆಂದು ತೋರಿಸುವ ಛಲ ಇವುಗಳೆಲ್ಲ ಇದಕ್ಕೆ ಕಾರಣವಾಗಿರಬಹುದು. ಇಂಗ್ಲಿಶರ ಮೇಲೆ ದ್ವೇಷವಿದ್ದರೂ, ಇಂಗ್ಲಿಶಿನ ಮೇಲೆ ಗೌರವ ಮಮತೆಗಳಿದ್ದವೆಂದು ಕುವೆಂಪುರವರೆ ತಮ್ಮ ಆತ್ಮಕಥೆ ನೆನಪಿನ ದೋಣಿಯಲ್ಲಿ ಹೇಳಿಕೊಂಡಿದ್ದಾರೆ (ಕುವೆಂಪು, ೧೯೯೮: ೧೭೨-೧೭೩).
ಇದಲ್ಲದೆ ಕುವೆಂಪುರವರು ತಮ್ಮ ಅಂದಿನ ದಿನಚರಿಯನ್ನು ಬರೆಯುತ್ತಿದ್ದದ್ದು ಇಂಗ್ಲಿಶಿನಲ್ಲೇ. ಆಗಲೆ ಹೇಳಿದಂತೆ ಇದು ಕೂಡ ಅಂದು ಬಹಳ ಸಾಮಾನ್ಯವಾಗಿದ್ದ ವಿಚಾರ. ಪತ್ರವ್ಯವಹಾರಗಳೂ ನಡೆಯುತ್ತಿದ್ದದ್ದು ಬಹುತೇಕ ಇಂಗ್ಲಿಶ್ ಭಾಷೆಯಲ್ಲೆ. ಗುಜರಾತಿನ ಮೊದಲ ಕಾದಂಬರಿಕಾರರಾದ ಗೋವರ್ಧನ್ ತ್ರಿಪಾಠಿಯವರೂ ಸಹ ತಮ್ಮ ದಿನಚರಿ, ಟಿಪ್ಪಣಿ ಪುಸ್ತಕಗಳನ್ನು ಇಂಗ್ಲಿಶಿನಲ್ಲೇ ಬರೆದಿದ್ದಾರೆ. ಓದುವುದು ಇಂಗ್ಲಿಶ್ ಮತ್ತು ಬರೆಯುವುದು ಅದರಲ್ಲೇ ಎಂಬುದು ಆ ಸಂದರ್ಭದ ಒತ್ತಡದ ಸತ್ಯವಾಗಿತ್ತು. ಇಂಥಹ ಸಂದರ್ಭದಲ್ಲಿ ಅವರು ಕನ್ನಡದಲ್ಲಿ ಬರವಣಿಗೆಗೆ ಮುಂದಾಗಿದ್ದು ಕುತೂಹಲದ ಸಂಗತಿಯಾಗಿದೆ. ಹಿಂದೆ ಹೇಳಿದಂತೆ, ಐರಿಷ್ ಕವಿ ಕಸಿನ್ಸ್‌ರ ಮಾತನ್ನು ನಿರ್ಲಕ್ಷಿಸಿದ ಕುವೆಂಪು, ಕನ್ನಡದಲ್ಲಿ ಮೊಟ್ಟಮೊದಲ ಕವನ ಬರೆದದ್ದು ಜುಲೈ ೧೦, ೧೯೨೪ರಲ್ಲಿ. ಆ ಸಂದರ್ಭವನ್ನು ತಮ್ಮ ದಿನಚರಿಯಿಂದ ಹೆಕ್ಕಿ ಕುವೆಂಪುರವರು ನೆನಪಿನ ದೋಣಿಯಲ್ಲಿ ನೀಡಿದ್ದಾರೆ:
ಖಿhis is ಣhe ಠಿಡಿeಛಿious ಜಚಿಥಿ ಜಿoಡಿ ತಿhiಛಿh I ತಿಚಿs sಣಡಿiviಟಿg ಜಿoಡಿ ಚಿ ಣime ತಿheಟಿ I ಡಿeಛಿeiveಜ iಟಿsಠಿiಡಿಚಿಣioಟಿ ಣo ತಿಡಿiಣe iಟಿ mಥಿ oತಿಟಿ ಟಚಿಟಿguಚಿge iಟಿ ಚಿ ಜiಜಿಜಿeಡಿeಟಿಣ sಣಥಿಟe so ಚಿs ಣo bಡಿiಟಿg I ಣhiಟಿಞ ಚಿ ಟಿeತಿ eಡಿಚಿ iಟಿ ಣhe ಚಿಟಿಟಿಚಿಟs oಜಿ ಏಚಿಟಿಟಿಚಿಜಚಿ ಟiಣeಡಿಚಿಣuಡಿe. I hಚಿve ಡಿebeಟಟeಜ ಚಿgಚಿiಟಿsಣ ಛಿoಟಿveಟಿಣioಟಿ iಟಿ ಣhe seಟಿse ಣhಚಿಣ I hಚಿve ಜಿoಟಟoತಿeಜ mಥಿ oತಿಟಿ meಣಡಿe eಣಛಿ. ಖಿhe ಣhemes ಚಿಡಿe mಥಿ ಣhemes ತಿhiಛಿh I ತಿouಟಜ hಚಿve oಣheಡಿತಿise ತಿಡಿiಣಣeಟಿ iಟಿ ಇಟಿgಟish. I ಛಿomಠಿoseಜ ಚಿ ಣiಟಿಥಿ beಚಿuಣiಜಿuಟ ಠಿoem ಚಿಟಿಜ I ಟಿಚಿmeಜ iಣ PUಗಿU oಡಿ (ಖಿhe ಜಿಟoತಿeಡಿ). Iಣ ತಿಚಿs hಚಿiಟeಜ bಥಿ mಥಿ ಜಿಡಿieಟಿಜs ಚಿಟಿಜ ಛಿಚಿsuಚಿಟ ಚಿಜmiಡಿeಡಿs. ಒಚಿಟಿಥಿ ಜಿoಡಿ ಣhe musiಛಿ, ಜಿeತಿ ಜಿoಡಿ ಣhe ಣheme ಚಿಟಿಜ sಣiಟಟ ಜಿeತಿ ಜಿoಡಿ ಣhe ಟಿeತಿ sಣಥಿಟe (siಛಿ). ಒoಣheಡಿ, guiಜe me! ಐeಣ ಣhe ಜಿiಡಿe buಡಿಟಿ iಟಿ mಥಿ heಚಿಡಿಣ! ಗಿಚಿಟಿಜe Sತಿಚಿmi ಗಿiveಞಚಿಟಿಚಿಟಿಜಚಿm! (ಕುವೆಂಪು, ೧೯೯೮: ೨೬೮-೨೬೯).
ನಾನಿಲ್ಲಿ ಕುವೆಂಪುರವರ ಕನ್ನಡಾನುವಾದವನ್ನು ನೀಡದೆ, ಬೇಕೆಂತಲೆ ಇಂಗ್ಲಿಶ್ ಮೂಲವನ್ನು ಉಳಿಸಿಕೊಂಡಿದ್ದೇನೆ. ಏಕೆಂದರೆ, ತನ್ನ ದಿನ ನಿತ್ಯದ ಅನುಭವವನ್ನು ಇಂಗ್ಲಿಶ್‌ನಲ್ಲಿ ಹಿಡಿದಿಡುವ ಸಂದರ್ಭದಲ್ಲಿ, ಅದಕ್ಕೆ ತದ್ವಿರುದ್ದವಾಗಿ ಕನ್ನಡದಲ್ಲಿ ಕವನ ಬರೆದದ್ದರ ಐರನಿಯನ್ನು ತೋರಿಸಲು. ಈ ಉದ್ದರಣೆಯನ್ನು ನೋಡಿದರೆ, ಕುವೆಂಪುರವರಿಗೆ ತಾವು ಏನೋ ಐತಿಹಾಸಿಕವಾದದ್ದನ್ನು ಮಾಡುತ್ತಿದ್ದೇವೆಂಬ ಅರಿವಿರುವುದು ಸ್ಪಷ್ಟವಾಗುತ್ತದೆ. ಇದು ಕನ್ನಡ ಸಾಹಿತ್ಯದ ಇತಿಹಾಸದಲ್ಲೇ ಹೊಸ ಅಧ್ಯಾಯ ಎಂಬಂತೆ ಅವರು ಅಂದು ಭಾವಿಸಿದ್ದಾರೆ. ಹೊಸ ವಿಷಯ (ಅವರ ಮಾತಿನಲ್ಲೇ ಹೇಳುವುದಾದರೆ ಇಂಗ್ಲಿಶ್‌ನಲ್ಲೇ ಬರೆಯಬಹುದಾದ ವಸ್ತು)ವನ್ನು, ಕನ್ನಡದಲ್ಲಿ ಅದುವರೆವಿಗೆ ಇಲ್ಲದಿದ್ದ ಛಂದಸ್ಸಿನಲ್ಲಿ ಬರೆದಿರುವ ಸಂತೋಷ ಅವರಿಗೆ. ಈ ಮುಂಚೆ ಒಂದು ಶತಮಾನದಿಂದ ಮಿಶನರಿಗಳು, ಪಠ್ಯಪುಸ್ತಕ ಬರಹಗಾರರು, ಕವನಗಳ ಭಾಷಾಂತರಕಾರರು ಮಾಡಿದ್ದ ಆ ರೀತಿಯ ಪ್ರಯೋಗಗಳ ಅರಿವು ಅವರಿಗೆ ಅಂದು ಇರಲಿಲ್ಲ ಎಂದು ಅವರೇ ಹೇಳಿಕೊಂಡಿರುವುದರಿಂದ ಅವರ ಮೇಲಿನ ಹೇಳಿಕೆಯನ್ನು ಉದ್ಧಟತನ ಎಂದು ಕರೆಯುವ ಅವಶ್ಯಕತೆ ಇಲ್ಲ. ನಾವಿಲ್ಲಿ ಗಮನಿಸಬೇಕಾದದ್ದು, ಕನ್ನಡದಲ್ಲಿ ೧೯೨೪ರ ಸಂದರ್ಭದಲ್ಲೂ ಆ ರೀತಿಯ ರಚನೆಗಳು ಅಷ್ಟಾಗಿ ಪ್ರಸಿದ್ಧಿ ಹೊಂದಿರಲಿಲ್ಲ ಎಂಬುದನ್ನು. ಅಲ್ಲದೆ ಕೆಲವು ವಸ್ತುಗಳನ್ನು ಕುರಿತ ಕವನಗಳ ರಚನೆಗೆ ಕನ್ನಡ ಸೂಕ್ತ, ಮತ್ತೆ ಕೆಲವು ವಸ್ತುಗಳನ್ನು ಕೇವಲ ಇಂಗ್ಲಿಶ್‌ನಲ್ಲೇ ಬರೆಯಲು ಸಾಧ್ಯ ಎಂಬ ನಂಬುಗೆ ಅಂದು ಪ್ರಚಲಿತದಲ್ಲಿದ್ದಂತೆ ಕಾಣುತ್ತದೆ. ಕುವೆಂಪುರವರು ಅಂಥಹ ಒಂದು ನಂಬುಗೆಯನ್ನು ಹುಸಿ ಮಾಡಿದ, ಒಂದು ಆಕಸ್ಮಿಕ ಸಂತೋಷದಲ್ಲಿದ್ದಂತೆ ಕಾಣುತ್ತದೆ, ಅವರ ದಿನಚರಿಯ ಬರವಣಿಗೆಯಲ್ಲಿ.
ನಾನು ಹಿಂದೆ ಹೇಳಿದಂತೆ, ನಾವೆಲ್ಲರು ದ್ವಿಭಾಷಿಕರು/ಬಹುಭಾಷಿಕರು. ಆದರೆ ಯಾವ ಸಂದರ್ಭದಲ್ಲಿ ಯಾವ ಭಾಷೆ ಬಳಸುತ್ತೇವೆ? ಏಕೆ? ಎಂಬ ಪ್ರಶ್ನೆಗಳು ಬಹಳ ಮುಖ್ಯವಾದದ್ದು. ಇಲ್ಲದಿದ್ದರೆ, ಶ್ರೇಣಿಕೃತವಾಗಿ ಜೋಡಿಸಲ್ಪಟ್ಟಿರುವ ಭಾಷೆಗಳನ್ನು, ರೋಮಾಂಟಿಕ್ ಆಗಿ ದ್ವಿಭಾಷೆ, ಬಹುಭಾಷೆ ಎಂದು ಸಮಾನ ನೆಲೆಯಲ್ಲಿ ಪರಿಭಾವಿಸುವ ಸಾಧ್ಯತೆಗಳಿರುತ್ತವೆ. ಕುವೆಂಪುರವರ ಟiಟಿguisಣiಛಿ eಛಿoಟಿomಥಿ (ಭಾಷಿಕ ವ್ಯವಸ್ಥೆ) ಏನು ಎಂಬುದನ್ನು ನಾವು ನೋಡಬೇಕಾಗುತ್ತದೆ. ಅಂದರೆ, ನಮಗೆ ಗೊತ್ತಿರುವ ಹಲವು ಭಾಷೆ/ಪ್ರಬೇಧಗಳನ್ನು ನಾವು ಹೇಗೆ ಬಳಕೆಯ ಸಂದರ್ಭದಲ್ಲಿ ನಿಯೋಜಿಸುತ್ತೇವೆ? ಭಾಷೆಗಳ ಶ್ರಮ ವಿಭಜನೆ ಏನು? ಅವುಗಳ ಪರಸ್ಪರ ಅಂತಸ್ತು-ಸಂಬಂಧಗಳು ರೂಪುಗೊಂಡಿರುವ ರೀತಿ ಏನು ಎಂದು ಗುರುತಿಸುವುದು.
ಮೇಲಿನ ಕುವೆಂಪುರವರ ದಿನಚರಿಯ ಉಲ್ಲೇಖವನ್ನು ಗಮನಿಸಿದರೆ, ಕನ್ನಡ ಭಾಷೆ ಈ ರೀತಿಯ ವಿಷಯಗಳ ಅಭಿವ್ಯಕ್ತಿಗೆ ಸೂಕ್ತವಲ್ಲ ಎಂದಿದ್ದನ್ನು ಸುಳ್ಳು ಮಾಡಿರುವ ಸಂಗತಿಯಿಂದಾದ ಹೆಮ್ಮೆ ಕಾಣುತ್ತದೆ. ಕನ್ನಡ ಭಾಷೆ ಕೆಲ ರೀತಿಯ ಅಭಿವ್ಯಕ್ತಿ ಸಾಧ್ಯತೆಗಳನ್ನು ಒಳಗೊಂಡಿಲ್ಲ ಎಂಬ ಮಾತನ್ನು ದೂರ ಮಾಡಿದ್ದಾರೆ ಕುವೆಂಪು. ಆ ರೀತಿ ಮಾಡಲು ಅವರು ಕನ್ನಡ ಭಾಷೆಯನ್ನೇ ಬದಲಾಯಿಸಬೇಕಾಗಿದೆ. ಏನೋ ಹೊಸದನ್ನು ಸೃಷ್ಟಿ ಮಾಡಬೇಕಿದೆ. ಕನ್ನಡ ಭಾಷೆ ಅದುವರೆವಿಗೆ ಅಭಿವ್ಯಕ್ತಿಸದ ವಿಷಯಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗುವಂತೆ ಅದನ್ನು ಮರುರೂಪಿಸಿದ್ದಾರೆ. ಅದು ಅವರೇ ಹೇಳುವಂತೆ ಸಂಪ್ರದಾಯದ ವಿರುದ್ದ ದಂಗೆ; ಕನ್ನಡದ ಮಡಿವಂತಿಕೆಯನ್ನು ಕಿತ್ತೆಸೆಯುವ; ಕನ್ನಡವನ್ನು ಹೊರಗಿನ ಮೈಲಿಗೆಗಳನ್ನು ಎದುರಿಸಿ ಉಳಿದುಕೊಳ್ಳುವ; ಅದನ್ನು ತನ್ನದಾಗಿ ಮಾಡಿಕೊಳ್ಳುವ; ಆ ಕಾಲದ ಲಿಂಗ್ವಿಸ್ಟಿಕ್ ಎಕಾನಮಿಯನ್ನು ಬದಲಾಯಿಸಿದ ಕ್ರಿಯೆ. ಕನ್ನಡ ಭಾಷೆಯನ್ನು ಆಧುನಿಕ ಕಾಲದ ಅಗತ್ಯಗಳನ್ನು ಪೂರೈಸುವ ಭಾಷೆಯಾಗಿ ರೂಪಿಸುವ ಅಗತ್ಯದ ಭಾಗವಾಗಿ ಈ ರೀತಿಯ ಪ್ರಯೋಗಗಳು ಅಂದು ನಡೆಯುತ್ತಿದ್ದವು. ಕವನ/ಸಾಹಿತ್ಯ ರಚನೆಯಲ್ಲಿ ಗೆದ್ದ ಕುವೆಂಪು, ದಿನಚರಿಯನ್ನು ಮಾತ್ರ ಇಂಗ್ಲಿಶ್‌ನಲ್ಲೇ ಉಳಿಸಿಕೊಳ್ಳುತಾರೆ; ಅದಕ್ಕಿನ್ನು ಕಾಲ ಕೂಡಿ ಬಂದಿರಲಿಲ್ಲ ಎನ್ನಿಸುತ್ತದೆ ಆಗ.
ಅವರು ಕನ್ನಡ ಕವನವನ್ನು ಬರೆದಾಕ್ಷಣ ಇಂಗ್ಲಿಶಿನಲ್ಲಿ ಬರೆಯುವುದನ್ನು ಬಿಟ್ಟರೆಂದೇನೂ ಅಲ್ಲ. ಕನ್ನಡದ ಅವರ ಕವನಗಳು ಅವರ ಇಂಗ್ಲಿಶ್ ಕವನಗಳಿಗೆ ಹೋಲಿಸಿದರೆ ಅಷ್ಟೇನೂ ಒಳ್ಳೆಯವಲ್ಲ ಎಂದು, ಅವರು ನಂಬಿದ್ದ ಕಾವ್ಯ ಮೀಮಾಂಸೆ ಅವರಿಗೆ ಹೇಳುತ್ತಿತ್ತು. ಅವರು ನಂತರ ಕೆಲವು ವರ್ಷಗಳು ದ್ವಿಭಾಷಾ ಕವಿಯಾಗಿದ್ದರು, ಕೆಲವೊಮ್ಮೆ ಅವರದೇ ಇಂಗ್ಲಿಶ್ ಕವನಗಳನ್ನೂ ಕನ್ನಡದಲ್ಲಿ ಮರುರಚಿಸಿದ್ದಾರೆ. ಉದಾಹರಣೆಗೆ ಅವರ ನೆನಪಿನ ದೋಣಿಯಲ್ಲಿನ ಈ ಸಾಲುಗಳನ್ನು ಗಮನಿಸಿ:
ಒಂದೇ ದಿನದಲ್ಲಿ ರಚಿಸಿದ ಆ ಎರಡು ಕವನಗಳಲ್ಲಿ ನನ್ನ ಇಂಗ್ಲಿಷ್ ಲಾವಣಿ, ಸೈನಿಕ ಶಸ್ತ್ರ ವಸ್ತ್ರಧಾರಿಯಾದ ಐರೋಪ್ಯ ಸೇನಾನಿಯಂತೆ, ಧೀರಭಂಗಿಯಲ್ಲಿ ಗೌರವಾಸ್ಪದವಾಗಿ ನಿಂತರೆ, ನನ್ನ ಕನ್ನಡ ಕವನ, ಉದಾತ್ತ ಭಾವಾಂಶವನ್ನು ಪಡೆದಿದ್ದರೂ, ರೂಪಾಂಶದಲ್ಲಿ ಭಾಷೆಯಲ್ಲಿ ಎಷ್ಟು ಕನಿಕರಣೀಯವಾಗಿ ಬಡಕಲಾಗಿದೆ ಎಂದರೆ ಹೊಟ್ಟೆಗೂ ಸರಿಯಾಗಿಲ್ಲದೆ ಹರಕಲು ಕೊಳೆಬಟ್ಟೆ ತೊಟ್ಟು ಸಣಕಲು ಕಾಲಿನಲ್ಲಿ ಬಾಗಿ ನಡೆಯುವ ಪ್ರಾಥಮಿಕ ಶಾಲೆಯ ಪುರೋಹಿತೋಪಾಧ್ಯಾಯನಂತೆ ನಾಚಿಕೆಗೇಡಾಗಿ ತೋರುತ್ತದೆ!ತಮ್ಮ ಆತ್ಮಕಥೆಯಲ್ಲಿ ಅವರು ಕೇವಲ ಇಂಗ್ಲಿಶ್ ಕವನವನ್ನು ನೀಡುತಾರೆ, ಕನ್ನಡ ಕವನವನ್ನು ನೀಡಲು ಹಿಂಜರಿಯುತ್ತಾರೆ (ಕುವೆಂಪು, ೧೯೯೮: ೩೭೫). ಇದು, ಅವರ ದ್ವಿಭಾಷಾ ಕವನಗಳನ್ನು ಕುರಿತ ಅವರದೇ ವಿಮರ್ಶೆ. ಅವರ ಎಷ್ಟೋ ಕವನಗಳು ಅವರದೇ ಇಂಗ್ಲಿಶ್ ಕವನಗಳ ಭಾಷಾಂತರಗಳು. ಮೇಲಿನದಕ್ಕೆ ವ್ಯತಿರಿಕ್ತವಾಗಿ ಕೆಲವೊಮ್ಮೆ ಅವರ ಭಾಷಾಂತರಗಳು ಅವರದೇ ಇಂಗ್ಲಿಶ್ ಕವನಗಳಿಗಿಂತ ಸುಂದರವೂ ಎನ್ನಿಸಿದೆ (ನೋಡಿ, ಕುವೆಂಪು, ೧೯೯೮: ೪೦೧-೪೦೫). ಅವರ ಮೊದಲ ಇಂಗ್ಲಿಶ್ ಕವನ ಸಂಗ್ರಹದ ನಂತರ ಬರೆದ ಇಂಗ್ಲಿಶ್ ಕವನಗಳಲ್ಲಿ ಕೆಲವನ್ನು ಆಯ್ದು ೧೯೭೩ರಲ್ಲಿ ಂಟieಟಿ ಊಚಿಡಿಠಿ ಎಂಬ ಹೆಸರಿನ ಸಂಗ್ರಹ ಪ್ರಕಟಿಸಿದ್ದಾರೆ. ಅದರಲ್ಲಿ ಒಟ್ಟು ೫೫ ಕವನಗಳಿವೆ.
ಂಟieಟಿ ಊಚಿಡಿಠಿ ಎಂಬ ಶೀರ್ಷಿಕೆಯನ್ನು ಅವರ ಮೊದಲ ಇಂಗ್ಲಿಶ್ ಕವನ ಸಂಗ್ರಹದ ಮೊದಲ ಕವನ Pಡಿeಟuಜe ಎಂಬ ಕವನದಿಂದ ತೆಗೆದುಕೊಳ್ಳಲಾಗಿದೆ. ಇದು ಕುವೆಂಪುರವರ ಮೊದಲ ಕವನವಾಗಿರುವುದರಿಂದ ಇದನ್ನು ಪರಿಶೀಲಿಸುವುದು ಉಚಿತ. ಕವನದ ಮೊದಲ ಸಾಲುಗಳು ಹೀಗಿವೆ:ಆisheಚಿಡಿಣeಟಿ ಟಿoಣ mಥಿ ಜಿಡಿieಟಿಜs ಣhis bಚಿಡಿಜ uಟಿಞಟಿoತಿಟಿ,Who hoಟಜs ಚಿಟಿ ಚಿಟieಟಿ hಚಿಡಿಠಿ ಚಿಟಿಜ ಟಿoಣ his oತಿಟಿ;ಂಟಿಜ ಣಡಿies ಣo sಣಡಿiಟಿg iಣs mಚಿzಥಿ ಛಿhoಡಿಜs beಜಿoಡಿeಂ ಛಿಡಿoತಿಜ immeಟಿse(॒ಕುವೆಂಪು, ೨೦೦೪ಬಿ: ೯೦೩).
ಇಲ್ಲಿ ಕವಿಗೆ ತಾನು ನುಡಿಸುತ್ತಿರುವ ವಾದ್ಯ (ಬಳಸುತ್ತಿರುವ ಭಾಷೆ) ಪರಕೀಯವಾದದ್ದೆಂಬ ಅರಿವಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅದು ಚಿಟieಟಿ ಎಂಬ ಪದದಲ್ಲಲ್ಲದೆ, ಮತ್ತೆ ಬರುವ ಟಿoಣ his oತಿಟಿ ಎಂಬ ನುಡಿಗುಚ್ಛದಲ್ಲೂ ಬರುವುದರಿಂದ, ಕವಿಗೆ ಅದು ಎಷ್ಟು ಮಹತ್ವದ ಅಂಶ ಎಂಬುದು ಮನಗಾಣುತ್ತದೆ. ವಸಾಹತು ಸಂದರ್ಭದಲ್ಲಿ ತನ್ನದಲ್ಲದ್ದನ್ನು ತನ್ನದಾಗಿ ಮಾಡಿಕೊಳ್ಳುವ, ಹಾಗು ಮಾಡಿಕೊಳ್ಳುವಾಗ ವಸಾಹತು ವಿಚಾಧಾರೆಯ ಪ್ರಭಾವದಿಂದ ತಪ್ಪಿಸಿಕೊಳ್ಳುವ, ಕೇವಲ ಆಧುನಿಕವಾದದ್ದನ್ನ ಮಾತ್ರ ಉಳಿಸಿಕೊಳ್ಳುವ ಸವಾಲು ಬಹು ದೊಡ್ಡದಾಗಿರುವುದನ್ನು ಇದು ಸೂಚಿಸುತ್ತದೆ.
ಇಂಗ್ಲಿಶಿನಲ್ಲಿ ಬರೆಯಲು ತೊಡಗಿದ್ದನ್ನು ಬಿಟ್ಟು ಕನ್ನಡದಲ್ಲಿ ಕುವೆಂಪು ಬರೆಯತೊಡಗಿದ್ದಷ್ಟೇ ಮುಖ್ಯವಲ್ಲ, ಅವರು ಕನ್ನಡ ಎಂ.ಎ. ಮಾಡಲು ತೊಡಗಿದ್ದೂ ಒಂದು ಆಕಸ್ಮಿಕ. ಮತ್ತು ಈ ಆಕಸ್ಮಿಕ ಸಂಭವಿಸಲಿಲ್ಲದಿದ್ದರೆ ಅವರಿಂದ ಬೇರೆ ಇನ್ನೇನನ್ನೋ ನಾವು ನಿರೀಕ್ಷಿಸಬಹುದಾಗಿತ್ತು ಅನ್ನಿಸುತ್ತೆ. ಇದಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಆತ್ಮಕಥೆಯಲ್ಲಿ ಪ್ರಸ್ತಾಪಿಸಿದ್ದರೂ, ಅದನ್ನು ಕುರಿತು ಮತ್ತೊಂದೆಡೆ ವಿವರವಾಗಿ ಬರೆದಿರುವುದರಿಂದ ಇಲ್ಲಿ ಅದನ್ನು ಹೇಳುವುದಿಲ್ಲ ಎನ್ನುತ್ತಾರೆ (ಕುವೆಂಪು, ೧೯೯೮: ೭೫೯). ಮನುಜಮಥ-ವಿಶ್ವಪಥ ಲೇಖನ ಸಂಗ್ರಹದ ಆ ಅಮೃತಕ್ಷಣದಲ್ಲಿ ಅದನ್ನು ಅವರು ವಿವರವಾಗಿ ಪ್ರಸ್ತಾಪಿಸಿದ್ದಾರೆ (ಕುವೆಂಪು, ೨೦೦೪ಬಿ: ೪೦೦-೪೦೪). ಅವರ ಮೇಲೆ ಕಾಲೇಜಿನ ದಿನಗಳಿಂದಲೂ ಬಹಳ ಪ್ರಭಾವ ಬೀರಿದ್ದ ರಾಮಕೃಷ್ಣ ಆಶ್ರಮ ಮತ್ತು ವಿವೇಕಾನಂದರ ವಿಚಾರಗಳು, ಅವರನ್ನು ಈಗಾಗಲೇ ಆಧ್ಯಾತ್ಮದೆಡೆ ಕುತೂಹಲಗೊಳ್ಳುವಂತೆ ಮಾಡಿದ್ದವು. ಇದರಿಂದಾಗಿ ಎಂ.ಎ.ಗೆ ತತ್ವಶಾಸ್ತ್ರವನ್ನು ವಿಷಯವಾಗಿ ತೆಗೆದುಕೊಳ್ಳಲು ಅವರು ನಿರ್ಧರಿಸಿದ್ದರು. ಆಶ್ರಮದೊಂದಿಗೆ ಸಂಪರ್ಕ ಹೊಂದಿದ್ದ ಹಾಗು ಅಂದಿನ ಬ್ರಾಹ್ಮಣ-ಬ್ರಾಹ್ಮಣೇತರ ಜಗಳದಲ್ಲಿ ಜಾತಿ ವ್ಯವಸ್ಥೆ ವಿರೋಧಕ್ಕಾಗಿ ಬ್ರಾಹ್ಮಣೇತರರ ಪರವಾಗಿದ್ದ, ಮತ್ತು ವಿದ್ಯಾರ್ಥಿಗಳಿಗೆ ಪ್ರತಿಯೊಂದು ವಿಷಯದಲ್ಲೂ ಅನುಕರಣೀಯವಾಗಿದ್ದ, ಸುಪ್ರಸಿದ್ದರೂ ಆಗಿದ್ದ ಪ್ರೊ. ವಾಡಿಯರವರ ಪ್ರಭಾವವು ಅದಕ್ಕೆ ಕಾರಣವಾಗಿತ್ತು. ವಾಡಿಯಾರಿಗೆ ಕನ್ನಡದ ಮೇಲೆ ಅಂತಹ ವಿಶೇಷ ಅಕ್ಕರೆಯೇನೂ ಇರಲಿಲ್ಲ. ಅವರು ಅಂದಿನ ಸಂದರ್ಭದಲ್ಲಿ ಬ್ರಾಹ್ಮಣೇತರರಿಗೆ ಇಂಗ್ಲಿಶೇ ಸರಿ ಎಂಬ ಧೋರಣೆ ಉಳ್ಳವರಾಗಿದ್ದವರೆಂದು ಕಾಣುತ್ತದೆ.
ಅದೇ ವರ್ಷ, ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ.ಯನ್ನು ಆರಂಭ ಮಾಡಿದ್ದರು. ಎ.ಆರ್. ಕೃಷ್ಣಶಾಸ್ತ್ರಿಗಳು ಎಂ.ಎ. ಫಿಲಾಸಫಿಗೆ ಅಪ್ಲಿಕೇಶನ್ ಹಾಕಿದ್ದ ಕುವೆಂಪುರವರನ್ನು ಕರೆದು, ಕನ್ನಡ ಎಂ.ಎ.ಗೆ ಸೇರಲು ಹೇಳುತ್ತಾರೆ. ಕುವೆಂಪುರವರು ತಕ್ಷಣಕ್ಕೆ ಒಪ್ಪದಿದ್ದರೂ, ಸ್ನೇಹಿತರೆಲ್ಲ ಅವರನ್ನು ಕನ್ನಡ ಎಂ.ಎ.ಗೆ ಸೇರಬೇಡವೆಂದೇ ಹೇಳಿದ್ದರೂ, ಸ್ವಲ್ಪ ದಿನಗಳ ನಂತರ, ಆಗ ೩ ವರ್ಷಗಳಲ್ಲಿ ೨ ಎಂ.ಎ. ಮಾಡಲು ಇದ್ದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿ, ಮೊದಲಿಗೆ ಕನ್ನಡ ಎಂ.ಎ. ಮಾಡಿ ನಂತರ ಫಿಲಾಸಫಿ ಎಂ.ಎ.ಯನ್ನೂ ಮಾಡಲು ನಿರ್ಧರಿಸುತ್ತಾರೆ. ಒಮ್ಮೆ ಕನ್ನಡ ಎಂ.ಎ. ಮುಗಿದ ನಂತರ ಅವರು ಕನ್ನಡ ಅಧ್ಯಾಪಕರಾಗಿ ನೇಮಕವೂ ಆಗುತ್ತಾರೆ. ಫಿಲಾಸಫಿ ಎಂ.ಎ. ಹಾಗು ವಾಡಿಯಾರವರ ಪ್ರಭಾವದಲ್ಲಿ ರೂಪುತಳೆಯಬೇಕಿದ್ದ, ನೇರವಾಗಿ ಹಿಂದುಳಿದ ವರ್ಗಗಳ ಚಳುವಳಿಯಲ್ಲಿ ಭಾಗವಹಿಸಬಹುದಾಗಿದ್ದ ವ್ಯಕ್ತಿತ್ವವೊಂದು, ಕನ್ನಡದ ಸಾಹಿತ್ಯದಲ್ಲಿ ಬರಹಗಾರನಾಗಿ, ಬ್ರಾಹ್ಮಣರ ಹಿಡಿತದಲ್ಲಿದ್ದ ಆ ವಲಯವನ್ನು ಪ್ರವೇಶಿಸಿ, ಜಾತಿಗೂ ಸಾಹಿತ್ಯಕ್ಕೂ ಇದ್ದಿದ್ದ ನಂಟೊಂದನ್ನು ದೂರಮಾಡುವ ವ್ಯಕ್ತಿತ್ವವಾಗಿ ರೂಪುಗೊಳ್ಳುತ್ತದೆ.
ಈಗ ೨೦ನೇ ಶತಮಾನದ ಎರಡು ಮತ್ತು ಮೂರನೇ ದಶಕಗಳಲ್ಲಿ ರಚಿತವಾಗಿರುವ ಅವರ ಕವನಗಳಲ್ಲಿ ಕೆಲವನ್ನು ಗಮನಿಸಬಹುದು. ಅವುಗಳಲ್ಲಿ ಬಹಳ ಮುಖ್ಯವಾದದ್ದು, ಕಳೆದ ವರ್ಷ ಸಾಕಷ್ಟು ವಿವಾದಕ್ಕೆ ಕಾರಣವಾದ ನಾಡಗೀತೆ. ಇಲ್ಲಿ ಅದು ವಿವಾದಕ್ಕೆ ಕಾರಣವಾಯ್ತು ಎಂದು ನನಗೆ ಮುಖ್ಯವಾಗಿಲ್ಲ, ಬದಲಿಗೆ ಕನ್ನಡ ಮತ್ತು ಭಾರತ ಎಂಬ ಗುರುತುಗಳ/ಕಲ್ಪಿತ-ಸಮುದಾಯಗಳ ಸಂಬಂಧವನ್ನು ಸ್ಪಷ್ಟಪಡಿಸುವ ದೃಷ್ಟಿಯಿಂದ ಮುಖ್ಯವಾಗುತ್ತದೆ. ವಿವಾದಕ್ಕೆ ಕಾರಣವಾದ ನಾಡಗೀತೆ, ಮೊದಲಿಗೆ ಹಲವಾರು ರೂಪಗಳನ್ನು ಹೊಂದಿತ್ತು. ೧೯೨೪-೨೫ರಲ್ಲಿ ಅದು ಕರ್ಣಾಟ(ಕ) ರಾಷ್ಟ್ರಗೀತೆ ಎಂದು ಲಿಖಿತಗೊಂಡಿತ್ತು. ಕುವೆಂಪುರವರೇ ಹೇಳುವಂತೆ ಅದು ಈಗಿನ ನಾಡಗೀತೆಯ ಪ್ರಪಿತಾಮಹನೊ ಪ್ರಪ್ರಪಿತಾಮಹನೊ ಆಗಿರಬೇಕು (ಕುವೆಂಪು, ೧೯೯೮: ೫೪೫). ಇದರಲ್ಲಿ ಬಹಳ ಮುಖ್ಯವಾದದ್ದು ನಾನಾಗಲೇ ಹೇಳಿದಂತೆ ಭಾರತ ಮತ್ತು ಕರ್ಣಾಟಕದ ಸಂಬಂಧ.
ಇಲ್ಲಿ ಕನ್ನಡ ಮತ್ತು ಕರ್ನಾಟಕಕ್ಕೆ ಇರುವ ಸಂಬಂಧದ ಸ್ವರೂಪವನ್ನು ಮತ್ತೆ ನೆನಪಿಸಿಕೊಳ್ಳುವುದು ಪುನರಾವರ್ತನೆಯಾಗುವುದಿಲ್ಲವೆಂದು ಭಾವಿಸಿಕೊಳ್ಳುತ್ತೇನೆ. ಕನ್ನಡ ಎನ್ನುವುದು ಭಾಷೆಯ ಆಧಾರದ ಮೇಲೆ ರೂಪಿತವಾದ ಗುರುತು. ಕನ್ನಡ ಭಾಷಯನ್ನು ಬಳಸುವವರನ್ನೆಲ್ಲಾ ಒಂದು ಸಮುದಾಯವಾಗಿ ಭಾವಿಸುವ ಪ್ರಕ್ರಿಯೆ, ಮತ್ತು ವ್ಯಕ್ತಿಗಳು ಆ ಸಮುದಾಯದ ಸದಸ್ಯರೆಂದು ಭಾವಿಸಿಕೊಂಡು ತಮ್ಮನ್ನು ಕನ್ನಡಿಗರೆಂದು ಗುರುತಿಸಿಕೊಳ್ಳುವುದೆ ಕನ್ನಡ ಗುರುತು ರಾಜಕಾರಣ (iಜeಟಿಣiಣಥಿ ಠಿoಟiಣiಛಿs). ಈ ಗುರುತು ರಾಜಕಾರಣ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು ಗುರುತಿಸಿ, ಅದನ್ನು ತನ್ನದು ಎಂದು ಸಾಧಿಸುತ್ತದೆ. ಮುದ್ರಣ ಯಂತ್ರ, ಪುಸ್ತಕ ಸಂಸ್ಸೃತಿಯ ಆಗಮನ, ಹೊಸ ಸಾಹಿತ್ಯದ ಉದಯ, ಹೊಸ ಶಿಕ್ಷಿತ ವರ್ಗದ ಬೆಳವಣಿಗೆ ಇವುಗಳ ಪರಿಣಾಮವಾಗಿ ರೂಪುಗೊಳ್ಳುತ್ತಿದ್ದ ಕನ್ನಡ ಎಂಬ ಕಲ್ಪಿತ ಸಮುದಾಯ, ತನ್ನನ್ನು ಕರ್ನಾಟಕ ಏಕೀಕರಣ ಎಂಬ ಹೆಸರಿನಲ್ಲಿ ತೋರ್ಪಡಿಸಿಕೊಳ್ಳುತ್ತಿತ್ತು. ವಸಾಹತು ಸಂದರ್ಭದಲ್ಲಿ ಬೇರೆ ಬೇರೆ ರಾಜಕೀಯ ಆಳ್ವಿಕೆಗೆ ಒಳಗಾಗಿದ್ದ ಕನ್ನಡ ಬಳಸಲ್ಪಡುವ ಪ್ರದೇಶಗಳನ್ನು ಗುರುತಿಸಿ, ಅವುಗಳನ್ನೆಲ್ಲಾ ಒಂದು ಸಾಂಸ್ಕೃತಿಕ ಘಟಕವಾಗಿ ಕಂಡು ಆ ಕಾರಣದಿಂದಾಗಿಯೇ ಅವುಗಳ ರಾಜಕೀಯ ಆಳ್ವಿಕೆಯೂ ಒಂದೇ ಆಗಬೇಕೆಂಬುದು ಈ ಏಕೀಕರಣದ ಉದ್ದೇಶವಾಗಿತ್ತು. ೧೯ನೇ ಶತಮಾನದ ಕೊನೆಯ ಭಾಗದಲ್ಲಿ ಅಂದು ಸದರನ್ ಮರಾಠ ಎಂದು ಕರೆಯಲ್ಪಡುತ್ತಿದ್ದ ಇಂದಿನ ಉತ್ತರ ಕರ್ನಾಟಕದ ಜನತೆ ಹೆಚ್ಚಿನ ಓದಿಗೆಂದು ಪುಣೆಗೆ ಹೋಗುತ್ತಿದ್ದರು. ಅಲ್ಲಿ ಮರಾಠಿಯವರು ಇವರನ್ನು ಕಾನಡಿಯಪ್ಪ ಎಂದು ಕರೆದು ಇವರನ್ನೆಲ್ಲ ಒಂದಾಗಿ ಮತ್ತು ಕೀಳಾಗಿಯೂ ನೋಡುತ್ತಿದ್ದರು, ಅದನ್ನು ವಿರೋಧಿಸುವ ಹಿನ್ನಲೆಯಲ್ಲಿ ಮರಾಠಿಯಂತೆಯೇ, ಕನ್ನಡವನ್ನು ಆಧುನಿಕ ವ್ಯವಹಾರಗಳಿಗೆ ರೂಪಿಸುವ ಪ್ರಜ್ಞೆ ಮೂಡುತ್ತಿತ್ತು. ಹೀಗೆ ಮರಾಠಿಯನ್ನು ಅನ್ಯವಾಗಿ ಭಾವಿಸಿ ಕನ್ನಡ ಗುರುತು ರಾಜಕಾರಣ ರೂಪುಗೊಳ್ಳುತ್ತಿತ್ತು. ಮತ್ತೊಂದೆಡೆ ಇಂಗ್ಲಿಶ್ ಭಾಷೆಯ ಸಾಹಿತ್ಯದಂತೆ ಕನ್ನಡದಲ್ಲಿ ವಿವಿಧ ಪ್ರಕಾರಗಳನ್ನು ರೂಪಿಸುವ ಕೆಲಸ ನಡೆಯುತ್ತಿತ್ತು. ಲಿರಿಕ್ಸ್, ಬ್ಯಾಲಡ್ಸ್, ಓಡ್, ಸಾನೆಟ್, ಕಾದಂಬರಿ, ನಾಟಕ, ದುರಂತ ನಾಟಕ ಇವುಗಳೆಲ್ಲವನ್ನು ಕನ್ನಡದಲ್ಲಿ ತರುವ ಪ್ರಯತ್ನ ನಡೆಯಿತು. ಹೀಗೆ ಇಂಗ್ಲಿಶನ್ನು ಅನ್ಯವಾಗಿ ಭಾವಿಸಿ ಕನ್ನಡ ಸ್ವವನ್ನು ರೂಪಿಸುವ ಪ್ರಯತ್ನ ನಡೆಯುತ್ತಿತ್ತು. ಕುವೆಂಪುರವರ ಬಹುತೇಕ ಪ್ರಯೋಗಗಳು ಈ ರಾಜಕಾರಣದ ಭಾಗವಾಗಿಯೇ ಮೂಡಿದಂತಿವೆ. ಅವರ ನೆನಪಿನ ದೋಣಿಯಲ್ಲಿ ಓದುತ್ತಿದ್ದರೆ, ಮಹಾಕಾವ್ಯವಾಗಲಿ, ಸಾನೆಟ್ ಆಗಲಿ, ಪ್ರಗಾಥವಾಗಲಿ, ಭಾವಗೀತೆಯಾಗಲಿ ಇದನ್ನು ಕನ್ನಡದಲ್ಲಿ ಬರೆಯಬೇಕು ಎಂಬ ಅವರ ಹಂಬಲ ಎದ್ದು ಕಾಣುತ್ತದೆ.
ಹೀಗೆ ಕನ್ನಡದ ಸಂದರ್ಭದಲ್ಲಿ ಬಂಗಾಳಿಗಿಂತ ಭಿನ್ನವಾಗಿ ಕನ್ನಡಿಗರೆಂಬ/ಕರ್ನಾಟಕವೆಂಬ ಕಲ್ಪಿತ ಸಮುದಾಯ ಸಾಂಸ್ಕೃತಿಕವಾಗಿ ರೂಪುಗೊಳ್ಳತೊಡಗಿತ್ತು. ಅದೇ ಸಂದರ್ಭದಲ್ಲಿ ಭಿನ್ನ ರೀತಿಯ ವಿಚಾರಧಾರೆಗಳ ಸಂಚಾರದಲ್ಲಿ ಭಾರತ ಎಂಬ ಕಲ್ಪಿತ ಸಮುದಾಯವು ಕನ್ನಡದಲ್ಲಿ ರೂಪುಗೊಳ್ಳತೊಡಗಿತ್ತು. ಕೆಲವೊಮ್ಮೆ ಏಕೀಕರಣಕ್ಕಾಗಿ ಹೋರಾಡುವವರನ್ನು ಸ್ವಾತಂತ್ರ್ಯ ಚಳುವಳಿ ವಿರೋಧಿಗಳೆಂದು, ಹಾಗೆಯೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರನ್ನು ಏಕೀಕರಣ ವಿರೋಧಿಗಳೆಂದೂ ಕರೆದದ್ದೂ ಉಂಟು. ಕನ್ನಡ ಮತ್ತು ಭಾರತ ಎಂಬ ಎರಡು ಗುರುತಗಳ ರಾಜಕಾರಣದಲ್ಲಿ ಏಕಕಾಲಕ್ಕೆ ಭಾಗವಹಿಸಲಾಗದ ಮತ್ತು ಅವುಗಳ ಸಂಬಂಧ ಸ್ಪಷ್ಟವಿಲ್ಲದ ಸಂದರ್ಭದಲ್ಲಿ ಈ ರೀತಿಯ ಮಾತುಗಳು ಬರುತ್ತಿದ್ದವು. ಏಕೀಕರಣ ವಿಚಾರಧಾರೆಯ ಆದ್ಯ ಪ್ರವರ್ತಕರಲ್ಲಿ ಒಬ್ಬರಾದ ಆಲೂರ ವೆಂಕಟರಾವ್ ಈ ಸಂಬಂಧಗಳನ್ನು ಒಂದರೊಂದೊಳಗಿನ ವೃತ್ತವಾಗಿ ನಿರ್ವಚಿಸಿದ್ದಾರೆ (ವೆಂಕಟರಾವ್, ೧೯೭೪: ೧೯೦-೧೯೯). ಆದರೆ ಅದು ಬಹಳ ಅಮೂರ್ತವಾದದ್ದು, ಆದ್ದರಿಂದ ಅದು ಇಂದು ಯಾರಿಗೂ ನೆನಪಿಲ್ಲ. ಆದರೆ ಅದನ್ನು ಕುವೆಂಪು ನಿರ್ವಚಿಸಿದ ರೀತಿ ಬಹಳ ಸುಲಭವಾಗಿ ಎಲ್ಲರನ್ನು ತಲುಪಿ ಬಹಳ ಜನಪ್ರಿಯವಾಗಿದೆ.
ಕುವೆಂಪುರವರು ತಮ್ಮ ಕರ್ಣಾಟ ರಾಷ್ಟ್ರಗೀತೆಯಲ್ಲಿ ಭಾರತ ಮತ್ತು ಕರ್ನಾಟಕದ ಸಂಬಂಧವನ್ನು ತಾಯಿ-ಮಗಳ ಸಂಬಂಧದಲ್ಲಿ ರೂಪಿಸಿದ್ದಾರೆ. ಈ ರೀತಿಯಾಗಿ ಕಳ್ಳು-ಬಳ್ಳಿಯ ಸಂಬಂಧದಲ್ಲಿ ಕರ್ನಾಟಕ ಮತ್ತು ಭಾರತವೆಂಬ ಎರಡು ಕಲ್ಪಿತ ಸಮುದಾಯಗಳನ್ನು ನಿರ್ವಚಿಸಿದ್ದು ಅವೆರಡರ ನಡುವೆ ಇದ್ದ ಟೆನ್ಷನ್‌ಗಳಲ್ಲಿ ಅನೇಕವನ್ನು ಕಡಿಮೆ ಮಾಡುತ್ತದೆ. ಅವೆರಡು ಪರಸ್ಪರ ವಿರುದ್ಧವಲ್ಲದ್ದೆಂದು ರೂಪಿಸಿ, ತಾಯಿ-ಮಗಳ ಸಂಬಂಧದಲ್ಲಿ ಅದನ್ನು ನೋಡಿದ್ದರಿಂದ, ರಾಜಕೀಯವಾಗಿ ಅವುಗಳನ್ನು ನೋಡುವ ಪ್ರಮೇಯವೇ ತಪ್ಪಿಹೋಗಿ, ಅವುಗಳಲ್ಲಿರುವ ಟೆನ್ಷನ್‌ಗಳು ಕಣ್ಣಿಗೆ ಕಾಣದಂತಾಗಿರುತ್ತವೆ.
೧೯೭೬ರಲ್ಲಿ ಪ್ರಕಟವಾದ ವಿಚಾರಕ್ರಾಂತಿಗೆ ಆಹ್ವಾನದಲ್ಲಿ ಕರ್ನಾಟಕ: ಇಟ್ಟ ಹೆಸರು ಕೊಟ್ಟ ಮಂತ್ರ ಎಂಬ ಲೇಖನವಿದೆ. ಅದರಲ್ಲಿ ಅವರು ಈ ಗೀತೆಯನ್ನು ಕುರಿತು ಇದೇ ಮಾತನ್ನೇ ಸ್ಪಷ್ಟಪಡಿಸಿದ್ದಾರೆ:
... ವಿದ್ಯಾರ್ಥಿ ದಶೆಯ ಆ ಕಾಲದಿಂದಲೂ ನಾನು ಕರ್ಣಾಟಕವನ್ನು ಭರತ ಖಂಡದ ಒಂದು ಅವಿಭಾಜ್ಯಾಂಗವಾಗಿ ಪರಿಕಲ್ಪಿಸಿಕೊಂಡಿದ್ದೇನೆಯೆ ಹೊರತು, ಪ್ರತ್ಯೇಕತಾಭಾವನೆಗೆ ಎಂದೂ ಲೇಶ ಮಾತ್ರವೂ ಅವಕಾಶವಿತ್ತಿಲ್ಲ. ಆದ್ದರಿಂದಲೆ ಕರ್ಣಾಟಕ ಮಾತೆಯನ್ನು ಕುರಿತು ಹಾಡುವಾಗ ಜಯ್ ಭಾರತ ಜನನಿಯ ತನುಜಾತೆ ಎಂದೇ ಪ್ರಾರಂಭಿಸಿದ್ದು. ಬೇರೊಂದೆಡೆ ಹೇಳಿರುವಂತೆ ಕರ್ಣಾಟಕ ಮಾತೆಗೆ ಸಲ್ಲುವ ಜಯಕಾರ ಆಕೆ ಭಾರತಜನನಿಯ ತನುಜಾತೆಯಾಗಿರುವುದರಿಂದಲೆ. ಅಂಗೋದ್ಭವೆಯಾಗಿ ವಿನಾ ಕರ್ಣಾಟಕಕ್ಕೆ ಬೇರೆಯ ಅಸ್ತಿತ್ವವೆಲ್ಲಿ? ನಾನು ರಾಜ್ಯದೃಷ್ಟಿಯಿಂದ ಕರ್ಣಾಟಕದವನು; ಭಾಷಾದೃಷ್ಟಿಯಿಂದ ಕನ್ನಡಿಗನು; ಆದರೆ ಸಂಸ್ಸೃತಿಯ ದೃಷ್ಟಿಯಿಂದ ಮತ್ತು ರಾಷ್ಟ್ರದೃಷ್ಟಿಯಿಂದ ಭಾರತೀಯನು. ನನ್ನ ಕರ್ಣಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರುನಿಲ್ಲುವುದಿಲ್ಲ (ಕುವೆಂಪು, ೨೦೦೪ಬಿ: ೫೦೬).
ಈ ಮಾತನ್ನು ಅವರು ೧೯೭೦ರ ದಶಕದಲ್ಲಿ ನಿಂತು ಹೇಳುತ್ತಿದ್ದರೂ, ಈ ರೀತಿಯ ಪರಿಹಾರವನ್ನು ಅವರ ಕವನದಲ್ಲಿ ಅವರು ೧೯೨೦ರ ದಶಕದಲ್ಲೇ ತಲುಪಿರುವುದನ್ನು ನೋಡಬಹುದು.
ಇನ್ನು ಈ ಗೀತೆಯ ವಿವಾದಾಂಶಕ್ಕೆ ಬಂದರೆ, ಅದು ಯಾವುದೇ ಕಲ್ಪಿತ ಸಮುದಾಯ/ರಾಷ್ಟ್ರಗಳ ವಿಷಯದಲ್ಲೂ ಇದ್ದದ್ದೆ. ತಾನು ರೂಪಿಸುತ್ತಿರುವ ಗುರುತು, ಸಮುದಾಯ ಮತ್ತು ಅದು ತನ್ನದೆಂದು ದಾವೆ ಹೂಡಿರುವ ಭೌಗೋಳಿಕ ಪ್ರದೇಶದ ಚರಿತ್ರೆಯನ್ನು ಬರೆಯುವಾಗ ಸಾಧ್ಯವಾದಷ್ಟು ಎಲ್ಲರನ್ನೂ ಒಗ್ಗೂಡಿಸುವಂಥಹ, ಹಳೆಯ ಸಮುದಾಯಗಳ ಸಂಕೇತಗಳಿಗೆ, ವಿಚಾರಗಳಿಗೆ- ಅದರಲ್ಲೂ ಆ ಸಮುದಾಯಗಳು ಸಾಂಸ್ಕೃತಿಕವಾಗಿ ಅಥವಾ ಜನಸಂಖ್ಯೆ ಹಾಗು ಆರ್ಥಿಕವಾಗಿ ಪ್ರಬಲವಾಗಿದ್ದರೆ- ಪ್ರಾಮುಖ್ಯ ನೀಡಲಾಗುತ್ತದೆ. ಹಳೆಯ ಸಮುದಾಯಗಳ ಸಂಕೇತ ಮತ್ತು ವಿಚಾರಗಳನ್ನು ಒಂದು ಭಾಷಿಕ ಸಮುದಾಯವಾಗಿ ಬೆಸೆಯುವ ಕ್ರಿಯೆಯನ್ನು ಇದು ಮಾಡುತ್ತಿರುತ್ತದೆ. ಆ ನಿಟ್ಟಿನಲ್ಲಿ ಕುವೆಂಪುರವರ ರಾಷ್ಟ್ರಗೀತೆಯು ತನ್ನ ಉದ್ದೇಶವನ್ನು ಬಹುಮಟ್ಟಿಗೆ ಈಡೇರಿಸಿಕೊಂಡಿದೆ. ಹೊಸದಾಗಿ ರೂಪಿತವಾದ ಸಮುದಾಯ ಮತ್ತು ಅದು ತನ್ನದೆಂದು ದಾವೆಹೂಡಿ ರೂಪಿಸಿದ ಸ್ಪೇಸ್ ಅನ್ನು ಆಳುತ್ತಿರುವ ಪ್ರಭುತ್ವದ ಸಂರಚನೆಯಲ್ಲಿ ಅದರ ಕಾರ್ಯಕ್ರಮಗಳಲ್ಲಿ ಸಮಪಾಲು ಪಡೆಯಲು ಪ್ರತಿಯೊಂದು ಹಳೆಯ ಸಮುದಾಯವು ತನ್ನನ್ನು ತಾನು ಮರುರೂಪಿಸಿಕೊಂಡು ಪ್ರಯತ್ನಿಸುತ್ತದೆ. ತನಗೆ ಈ ಹೊಸ ಪದ್ಧತಿಯಲ್ಲಿ ಅನ್ಯಾಯವಾಗಿದೆ ಎಂದು ಅದು ಭಾವಿಸಿದಾಗಲೆಲ್ಲ ಈ ರೀತಿಯ ವಿವಾದಗಳು ತಲೆದೋರುತ್ತವೆ. ಏಕೆಂದರೆ ಈ ಅನ್ಯಾಯವು ಹೊಸ ಸಮುದಾಯದ ನಿರ್ಮಿತಿಯ ಸಂರಚನೆಯಲ್ಲೇ ಅಡಕವಾಗಿದೆ ಎಂದು ಸಾಧಿಸಲು ಅದು ಯತ್ನಿಸುತ್ತದೆ. ಈ ಅನ್ಯಾಯ ಎಂಬ ಪದವನ್ನು ಸ್ವಲ್ಪ ಸ್ಪಷ್ಟಪಡಿಸಬೇಕಾಗುತ್ತದೆ, ಇಲ್ಲದಿದ್ದರೆ ಈ ಮಾತುಗಳೂ ವಿವಾದಕ್ಕೆ ಎಡೆ ಮಾಡಿಕೊಡಬಹುದು. ಈ ಅನ್ಯಾಯ ನಿಜವಾದದ್ದಾಗಿರಬಹುದು; ಇಲ್ಲ ಆ ಸಮುದಾಯ ಆ ರೀತಿ ಭಾವಿಸಿಕೊಂಡಿರಬಹುದು; ಇಲ್ಲ ಹಿಂದಿದ್ದ ಕೆಲವು ಸವಲತ್ತುಗಳು ಪ್ರಜಾಪ್ರಭುತ್ವದಲ್ಲಿ ಸ್ವಲ್ಪಮಟ್ಟಿಗಾದರೂ ವಿಕೇಂದ್ರಿಕರಣಗೊಂಡಿದ್ದರಿಂದ, ಅದನ್ನು ಆ ಸಮುದಾಯ ತನಗೆ ಆದ ನಷ್ಟ ಎಂದೋ ಅನ್ಯಾಯ ಎಂದೋ ಭಾವಿಸುತ್ತಿರಬಹುದು. ಇದರಲ್ಲಿ ಯಾವುದೇ ನಿಜವಾದರೂ ಅದು ತನಗೆ ಅನ್ಯಾಯ ಆಗುತ್ತಿದೆ ಎಂಬ ರೀತಿಯಲ್ಲೇ ತನ್ನ ವಾದವನ್ನು ಮಂಡಿಸುತ್ತಿರುತ್ತದೆ.
ಕುವೆಂಪುರವರ ೧೯೨೦-೪೦ರವರೆಗಿನ ಕವನಗಳನ್ನು ಪರಿಶೀಲಿಸಿದರೆ ಅವುಗಳಲ್ಲಿ ಕನ್ನಡಮಾತೆ ಮತ್ತು ಭಾರತದ ಸ್ವಾತಂತ್ರ್ಯ ಎರಡನ್ನೂ ಕುರಿತ ಕವನಗಳು ಕಂಡು ಬರುತ್ತವೆ. ಕೆಲವು ಅವರ ಕವನ ಸಂಗ್ರಹಗಳಲ್ಲಿ ಕಂಡುಬಂದರೆ, ಮತ್ತೆ ಕೆಲವು ಅವರ ದಿನಚರಿಯ ಪುಟಗಳಲ್ಲೇ ಉಳಿದು ಬಿಟ್ಟಿವೆ, ಅವರಿಗೆ, ಮತ್ತೆ ಬೇರೆಯವರ ಗಮನಕ್ಕೆ ತರುವಂಥಹ ಉತ್ತಮ ಕವನಗಳು ಎಂದೆನಿಸಿದ್ದು ಮಾತ್ರ ನೆನಪಿನದೋಣಿಯಲ್ಲಿ ಬಂದಿವೆ. ಇವುಗಳಲ್ಲಿ ನೇರವಾಗಿ ಭಾರತಮಾತೆಗೆ ಅಥವಾ ಕನ್ನಡಮಾತೆಯನ್ನು ಉದ್ಧೇಶಿಸಿ ಬರೆದಿರುವ ಕವನಗಳಷ್ಟೇ ಅಲ್ಲ ಇತರ ರೀತಿಯ ಕವನಗಳೂ ಅವರ ಭಾರತ-ಕರ್ನಾಟಕ ಚಿಂತನೆಯನ್ನು ಹಿಡಿದಿಡುತ್ತವೆ. ಕರ್ನಾಟಕ ಎಂಬ ಭೌಗೋಳಿಕ ಪ್ರದೇಶವನ್ನು ರೂಪಿಸುವ ನಿಟ್ಟಿನಲ್ಲಿ ಅವುಗಳ ರೇಖಾ ನಕ್ಷೆಗಳಿಗಿಂತ ಅವುಗಳು ಒಳಗೊಳ್ಳುವ ನದಿ, ಕಾಡು, ಗುಡ್ಡಗಳ ವರ್ಣನೆ. ಅವೆಲ್ಲವನ್ನು ಅದ್ಭುತವಾಗಿ ವರ್ಣಿಸಿ ಈ ರೀತಿಯ ಸ್ಥಳ ಪ್ರಪಂಚದ ಯಾವ ಮೂಲೆಯಲ್ಲೂ ಇಲ್ಲ ಎನ್ನುವ ಭಾವನೆ ಮೂಡಿಸುವ ಕವನಗಳು ಕಲ್ಪಿತ ಸಮುದಾಯದ ಸದಸ್ಯರನ್ನು ಬೆಸೆಯುವಲ್ಲಿ ಸೂಕ್ತವಾಗಿರುತ್ತವೆ. ಈ ರೀತಿಯ ಕವನಗಳನ್ನೂ ಕುವೆಂಪು ಸಾಕಷ್ಪು ರಚಿಸಿದ್ದಾರೆ. ಉತ್ತರದ ತುಂಗೆಯಿರಲಿ ಅಥವಾ ದಕ್ಷಿಣದ ಕಾವೇರಿಯಿರಲಿ ಎಲ್ಲವೂ ಅವರ ಕಾವ್ಯ ವಸ್ತುಗಳಾಗಿವೆ. ಇದಲ್ಲದೆ, ಭಾರತದ ವಿಷಯದಲ್ಲಿ ವೀರ್‌ಸಾವರ್‌ಕರ್‌ರನ್ನು ಬ್ರಿಟಿಷರು ಬಂಧಿಸಿದಾಗ ಅವರು ಎರಡು ಕವನಗಳನ್ನು ಬರೆದಿದ್ದಾರೆ, ಗಾಂಧಿ, ನೆಹರು, ತಿಲಕ್ ಕುರಿತು, ಸತ್ಯಾಗ್ರಹಿಗಳನ್ನು ಕುರಿತು ಸಹ ಕವನಗಳನ್ನು ಬರೆದಿದ್ದಾರೆ. ಅವುಗಳನ್ನೆಲ್ಲಾ ಇಲ್ಲಿ ನಾನು ವಿವರವಾಗಿ ವಿವೇಚಿಸುವುದಿಲ್ಲ.
ವಸಾಹತುಶಾಹಿಯ ಆಳ್ವಿಕೆ ಮುಗಿದು, ಭಾರತ ಒಂದು ರಾಷ್ಟ್ರವಾಗಿ ರೂಪುಗೊಂಡು ತನ್ನದೇ ಆದ ಪ್ರಭುತ್ವವನ್ನು ರಚಿಸಿಕೊಂಡ ಕಾಲದ ಅವರ ವಿಚಾರಗಳನ್ನು ಪರಿಶೀಲಿಸಿದರೆ, ಅವರು ಕೇವಲ ಅಂದಿನ ಪ್ರಬಲ ವಿಚಾರಧಾರೆಯಾಗಿದ್ದ ರಾಷ್ಟ್ರೀಯತೆಯನ್ನು ಸಂಪೂರ್ಣವಾಗಿ ಒಪ್ಪಿದ್ದರು ಹಾಗು ಅದರಂತೆ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿದ್ದರು ಎಂದೇನಲ್ಲ. ಅವರ ೧೯೫೦ರ ನಂತರದ ಕವನಗಳು ಮತ್ತು ಗದ್ಯ ಬರವಣಿಗೆಯನ್ನು ಅವಲೋಕಿಸಿದರೆ, ಅವರು ಅವುಗಳನ್ನು ಸ್ವಲ್ಪ ಮಟ್ಟಿಗಾದರೂ ಮರುರೂಪಿಸುತ್ತಿದ್ದಾರೇನೋ ಎಂದನಿಸುತ್ತದೆ. ಇದನ್ನು ಸ್ಥೂಲವಾಗಿ ಇಲ್ಲಿ ಕರ್ನಾಟಕ ಎಂಬ ಪರಿಕಲ್ಪನೆಯ ಮಟ್ಟಿಗೆ ಸೂಚಿಸಲು ಪ್ರಯತ್ನಿಸುತ್ತೇನೆ.
ತಾವು ಧ್ಯಾನಿಸುತ್ತಿದ್ದ ಭಾರತ ಎಂಬ ರಾಷ್ಟ್ರ ೧೯೪೭ರಲ್ಲಿ ಪ್ರಭುತ್ವದ ರೂಪದಲ್ಲಿ ಸಾಕಾರಗೊಂಡದ್ದನ್ನು ಮತ್ತು ೧೯೫೬ರಲ್ಲಿ ಏಕೀಕರಣವಾದದ್ದನ್ನು ಕುವೆಂಪು ಸಂಭ್ರಮದಿಂದ ತಮ್ಮ ಕವನಗಳಲ್ಲಿ ಹಾಡುತ್ತಾರೆ (ಅಡಿ ಟಿಪ್ಪಣಿ ೪ರ ಕೊನೆಯ ಭಾಗವನ್ನು ಗಮನಿಸಿ). ಕನಸು ನನಸಾದ ಸಂದರ್ಭಗಳು ಅವು. ಆದರೆ ಕುವೆಂಪು ಭಾವನಾತ್ಮಕ ಕವಿಯಾದರು ವೈಚಾರಿಕತೆಯಲ್ಲಿ, ವಿeನದಲ್ಲಿ, ಆಧುನಿಕ ವಿಚಾರಧಾರೆಯಲ್ಲಿ ಬಲವಾದ ನಂಬಿಕೆ ಇಟ್ಟವರು, ಆದ್ದರಿಂದ ಭಾವನೆಗಳಲ್ಲೇ, ಸಂಭ್ರಮದಲ್ಲೇ ಕೊಚ್ಚಿಕೊಂಡುಹೋಗದೆ ತಮ್ಮ ವಿಚಾರಗಳನ್ನು ಮರುಪರಿಶೀಲಿಸುತ್ತಾರೆ.
೧೯೪೯ರ ಸಂದರ್ಭದಲ್ಲಿ ಕುವೆಂಪುರವರು ಮಹಾರಾಜಾ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಏಕೀಕರಣದ ಪರವಾಗಿ ಮಾತನಾಡಿದರು. ಆಗ ಸಚಿವರೊಬ್ಬರಿಂದ ಎಚ್ಚರಿಕೆಯ ನೋಟಿಸ್ ಬಂತಂತೆ. ಅದಕ್ಕೆ ಪ್ರತ್ಯುತ್ತರವಾಗಿ ಅವರು ಅಖಂಡ ಕರ್ಣಾಟಕ ಕವನವನ್ನು ರಚಿಸಿದರಂತೆ. ಇದರಲ್ಲಿ ಸ್ವಾತಂತ್ರ್ಯದ ನಂತರ ಸ್ಥಾಪನೆಯಾದ ಮೈಸೂರು ರಾಜ್ಯದ ಪ್ರಭುತ್ವ (ಮಂತ್ರಿಮಂಡಲ)ದ ಬಗ್ಗೆ ಅವರಿಗಿದ್ದ ನಿರಾಕರಣೆಯನ್ನು, ಅಸಮಧಾನವನ್ನು ಈ ಕವನ ತೋರುತ್ತದೆ. ಸ್ವಾತಂತ್ರ್ಯ ಬಂದ ನಂತರ ಎಲ್ಲ ಕನಸುಗಳೂ ಈಡೇರಬಹುದೆಂದುಕೊಂಡಿದ್ದ ಅವರ ಕನಸು ಛಿದ್ರವಾದದ್ದನ್ನು ಇದು ತೋರುತ್ತದೆ. ಆದರೆ ಕವನದಲ್ಲೆಲ್ಲೂ ನಿರಾಸೆಯ ಛಾಯೆ ಇಲ್ಲ, ವಾಸ್ತವ ಕರ್ನಾಟಕದ ಬದಲಿಗೆ ಅವರು ಸಾಹಿತ್ಯ ಕರ್ನಾಟಕಕ್ಕೆ ಈ ಕವನದಲ್ಲಿ ಹೊರಟುಹೋಗುತ್ತಾರೆ:
... ಅಖಂಡ ಕರ್ಣಾಟಕ:ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲರಚಿಸುವೊಂದು ಕೃತಕವಲ್ತೊಸಿರಿಗನ್ನಡ ಸರಸ್ವತಿಯ ವಜ್ರಕರ್ಣ ಕುಂಡಲ!
ಅಖಂಡ ಕರ್ಣಾಟಕ:ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!ನೃಪತುಂಗನೆ ಚಕ್ರವರ್ತಿ!ಪಂಪನಲ್ಲಿ ಮುಖ್ಯಮಂತ್ರಿ!ರನ್ನ ಜನ್ನ ನಾಗವರ್‍ಮರಾಘವಾಂಕ ಹರಿಹರಬಸವೇಶ್ವರ ನಾರಣಪ್ಪಸರ್ವಜ್ಞ ಷಡಕ್ಷರ:ಸರಸ್ವತಿಯೆ ರಚಿಸಿದೊಂದುನಿತ್ಯ ಸಚಿವ ಮಂಡಲತನಗೆ ರುಚಿರ ಕುಂಡಲ!... (ಕುವೆಂಪು, ೨೦೦೦ಬಿ: ೧೨೪-೧೨೫)
ಏಕೀಕರಣಕ್ಕಿದ್ದ ವಿರೋಧ, ಏಕೀಕರಣವಾದರೂ ಕರ್ನಾಟಕವಾಗದೆ ಮೈಸೂರು ಎಂದಾದದ್ದು ಇವೆಲ್ಲವೂ ಅವರನ್ನು ಕಾಡಿಸಿತ್ತು. ಇದರಿಂದಾಗಿ ಅವರು ಭೌಗೋಳಿಕ ಕರ್ನಾಟಕಕ್ಕೆ ಬದಲಾಗಿ ಸಾಂಸ್ಕೃತಿಕ ಕರ್ನಾಟಕದ ಉಗ್ರ ಪ್ರತಿಪಾದಕರಾಗುತ್ತ ಹೋದರು. ಅದನ್ನು ಕುರಿತು ಅವರು ೧೯೭೦ರ ದಶಕದಲ್ಲಿ ಆಡಿದ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು:
...ಹರಿದು ಹಂಚಿಹೋಗಿದ್ದ ಕನ್ನಡನಾಡಿನ ಭಾಗಗಳು ಒಂದುಗೂಡುತ್ತವೆ ಎಂಬುದು ಆಗ (ಬ್ರಿಟಿಷ್ ಪ್ರಭುತ್ವದ ಸಂದರ್ಭದಲ್ಲಿ) ಕನಸಿನ ಮಾತಾಗಿತ್ತು. ಏಕೆಂದರೆ ಭರತ ಖಂಡ ಸ್ವತಂತ್ರವಾಗುತ್ತದೆ ಎಂಬ ಕಲ್ಪನೆಯೆ ಆಗ ಯಾರಿಗೂ ಇರಲಿಲ್ಲ; ಬ್ರಿಟಿಷ್ ಚಕ್ರಾಧಿಪತ್ಯದ ಸುಭದ್ರತೆ, ನಿತ್ಯತೆಗಳಲ್ಲಿ ಎಲ್ಲರೂ ಭರವಸೆಯಿಟ್ಟಿದ್ದ ಕಾಲವದು. ಆದ್ದರಿಂದಲೇ ನಾನು ಕರ್ಣಾಟಕ ಮಾತೆಯನ್ನು ಕೀರ್ತಿಸಿದರೂ ಅದು ಭೌಗೋಳಿಕವಾದುದಕ್ಕಿಂತ ವಿಶೇಷವಾಗಿ ಸಾಂಸ್ಕೃತಿಕವಾಗಿತ್ತು. ಈ ಸಾಂಸ್ಕೃತಿಕ ಕರ್ಣಾಟಕದ ನಿಲುವನ್ನು ಮತ್ತೂ ಖಚಿತ ಸ್ಪಷ್ಟವಾಗಿ ನಾನು ಪ್ರತಿಪಾದಿಸಿದೆ...(ಕುವೆಂಪು, ೨೦೦೪ಬಿ: ೫೦೬-೫೦೭).
ಅನಿಕೇತನ(೧೯೬೩) ಸಂಗ್ರಹದಲ್ಲಿನ ೧೯೫೬ರಲ್ಲಿ ರಚಿತವಾದ ಅನಿಕೇತನ ಕವನದಲ್ಲಿ ಭೌಗೋಳಿಕ ಎಲ್ಲೆಯನ್ನು ಮೀರಿ ಅನಂತತೆಯ ಬಗ್ಗೆ, ಅನಿಕೇತನದ ಬಗ್ಗೆ ಮಾತನಾಡುತ್ತಾರೆ. ಧಾರವಾಡದಲ್ಲಿ ೩೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಭಾಷಣ ಕೂಡ ಸಂಸ್ಕೃತಿ ಕರ್ಣಾಟಕದ ಪರಿಕಲ್ಪನೆಯನ್ನು ಮುಂದಿಡುತ್ತದೆ (ಕುವೆಂಪು, ೨೦೦೪ಬಿ: ೧೪೧-೧೭೩).
ಈ ವಿಚಾರಗಳು ೧೯೪೧ರ ಮೆಟ್ಟುವ ನೆಲ ಕರ್ನಾಟಕ ಎಂಬ ಕೋಗಿಲೆ ಮತ್ತು ಸೋವಿಯಟ್ ರಷ್ಯಾ (೧೯೪೪) ಕವನ ಸಂಕಲನದಲ್ಲೇ ಬೀಜರೂಪದಲ್ಲಿ ಕಾಣುತ್ತದೆ:
ಎಲ್ಲಾದರು ಇರು; ಎಂತಾದರು ಇರು;ಎಂದೆಂದಿಗೂ ನೀ ಕನ್ನಡವಾಗಿರು,ಕನ್ನಡ ಗೋವಿನ ಮುದ್ದಿನ ಕರು,ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!
ಈ ಸಾಲುಗಳಲ್ಲಿ ಭೌಗೋಳಿಕತೆಯನ್ನು ಮೀರಿದ ಕನ್ನಡ ಗುರುತನ್ನು ಪರಿಭಾವಿಸಿಕೊಳ್ಳುವ ಪ್ರಯತ್ನವನ್ನು ಕಾಣುತ್ತೇವೆ:
ನೀ ಮೆಟ್ಟುವ ನೆಲ-ಅದೆ ಕರ್ನಾಟಕ;ನೀನೇರುವ ಮಲೆ-ಸಹ್ಯಾದ್ರಿ.ನೀ ಮುಟ್ಟುವ ಮರ-ಶ್ರೀಗಂಧದ ಮರ;ನೀ ಕುಡಿಯುವ ನೀರ್-ಕಾವೇರಿ (ಕುವೆಂಪು, ೨೦೦೦ಎ: ೩೮೭).
ಕನ್ನಡ-ಕರ್ನಾಟಕದ ಅನನ್ಯತೆಯ ಗುರುತುಗಳೆಂದು ರೂಪುಗೊಂಡವುಗಳನ್ನು ಕೂಡ, ಇಲ್ಲಿ ನಿರ್-ಆತ್ಯಂತಿಕಗೊಳಿಸಿ, ಭಾವನಾತ್ಮಕವಾಗಿ ಯಾವುದನ್ನು ಬೇಕಾದರು ಎಲ್ಲಿ ಬೇಕಾದರು ಪರಿಭಾವಿಸಿಕೊಳ್ಳಬಹುದೆಂಬ ವಿಚಾರ ಇಲ್ಲಿದೆ. ಭೌತಿಕ ಪ್ರತೀಕಗಳಿಗೆ ಭಾವನಾತ್ಮಕ ಗಂಟು ಹಚ್ಚುವ ಬದಲು, ಅವುಗಳನ್ನು ಬಿಚ್ಚಿ, ಅವೆರಡರ ಸಂಬಂಧವಿರುವುದು ಮನದಲ್ಲೇ ಹೊರತು ವಾಸ್ತವದಲ್ಲಲ್ಲ ಎಂಬ ವಾದ ಇಲ್ಲಿ ಕಾಣುತ್ತದೆ. ಇದು, ಆ ಸಂದರ್ಭದ ಪ್ರಮುಖ ವಿಚಾರಧಾರೆಗಿಂತ ತುಸು ಭಿನ್ನವಾಗಿದೆ. ಇದೇ ವಿಚಾರ ನಂತರ ಅನಿಕೇತನದಲ್ಲಿ ಎಲ್ಲವನ್ನೂ ಮೀರುವ (ಕನ್ನಡವನ್ನೂ ಸೇರಿಸಿಕೊಂಡು) ಸ್ಥಿತಿಯನ್ನು ತಲುಪುತ್ತದೆ.
ಇದರರ್ಥ ಕುವೆಂಪು ೧೯೬೦ರ ದಶಕದ ನಂತರ ಕನ್ನಡ-ಕರ್ನಾಟಕದ ಮೇಲೆ ಆಸಕ್ತಿ ಕಳೆದುಕೊಂಡರಂದೇನಲ್ಲ. ಅವರ ಗದ್ಯ ಬರಹಗಳು ಮತ್ತು ಭಾಷಣಗಳನ್ನು ನೋಡಿದರೆ ಈ ವಿಚಾರ ಸ್ಪಷ್ಟಗೊಳ್ಳುತ್ತದೆ. ಕನ್ನಡ ಗುರುತು ಮತ್ತು ಕರ್ನಾಟಕದ ವಿಚಾರ ಕಡಿಮೆಯಾದರೂ, ಕನ್ನಡ ಭಾಷೆ, ಅದರಲ್ಲೂ ಶಿಕ್ಷಣ ಮಾಧ್ಯಮವಾಗಿ, ಕುವೆಂಪುರವರ ಕೇಂದ್ರ ಕಾಳಜಿಯಾಗಿರುವುದು ಕಂಡು ಬರುತ್ತದೆ. ಅದರಲ್ಲೂ ಅವರು ಮೈಸೂರು ವಿಶ್ವವಿದ್ಯಾಲಯದ ವೈಸ್-ಚಾನ್ಸಲರ್ ಆಗಿದ್ದ ಸಂದರ್ಭದಲ್ಲಿನ ಅವರ ಅನೇಕ ಕಾರ್ಯಗಳಲ್ಲಿ, ಭಾಷಣಗಳಲ್ಲಿ, ಮತ್ತೆ ಮತ್ತೆ ಕನ್ನಡ ಮಾಧ್ಯಮದ ವಿಚಾರ ಬರುತ್ತದೆ. ಅವರಿಗಿದ್ದ ಕಾಳಜಿ, ಕನ್ನಡ ಭಾಷೆಯನ್ನು ಕುರಿತದ್ದು ಎನ್ನುವುದಕ್ಕಿಂತ, ಕನ್ನಡ ಮಾಧ್ಯಮದಲ್ಲಿ ಕಲಿತವರು ಮತ್ತು ಇಂಗ್ಲಿಶ್ ಭಾಷೆ ಗೊತ್ತಿರುವವರ ನಡುವಿನ ಅಂತರ, ತಾರತಮ್ಯ ಅವರನ್ನು ಕಾಡುತ್ತಿತ್ತು ಎನ್ನಿಸುತ್ತದೆ. ಪ್ರಸಾರಾಂಗವನ್ನು ಮತ್ತು ಅದರಡಿಯಲ್ಲಿ ರೂಪಿತವಾದ ಪ್ರಚಾರೋಪನ್ಯಾಸ ಯೋಜನೆಯನ್ನು ಅವರು ವಿದ್ಯಾ ಪ್ರಸಾರದ ಸಂಸ್ಥಯಾಗಿ ಪರಿಭಾವಿಸಿದ್ದಕ್ಕಿಂತ ಹೆಚ್ಚಾಗಿ, ಕನ್ನಡದಲ್ಲಿ ಸಮಸ್ತ eನವನ್ನೂ ಪಸರಿಸುವ ಸಂಸ್ಥೆಯಾಗಿ ಪರಿಭಾವಿಸಿದ್ದೇ ಹೆಚ್ಚು (ನೋಡಿ, ಕುವೆಂಪು, ೨೦೦೪ಬಿ: ೧೧೭-೧೩೭). ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಅವರು ನೋಡಿದ್ದರಿಂದ, ಇಂಗ್ಲಿಶ್ ಭಾಷೆಯನ್ನು ವಿರೋಧಿಸುವ ಅಪಾಯದಿಂದಾಗಿ ಪಾರಾಗುತ್ತಾರೆ. ಇಂಗ್ಲಿಶ್ ಭಾಷೆಯಾಗಿ ಬೇಕು, ಮಾಧ್ಯಮವಾಗಿ ಅಲ್ಲ, ಎಂದು ಅವರು ಹೇಳುತ್ತಾರೆ. ಮತ್ತು ಮಾಧ್ಯಮದ ವಿಷಯದಲ್ಲೂ ಅದನ್ನು ವಿದ್ಯಾರ್ಥಿಗಳು ಮತ್ತು ಪಾಲಕರ ಅಭಿಮತಕ್ಕೆ ಬಿಡಬೇಕೆ ಹೊರತು, ಬಲತ್ಕಾರ ಮಾಡಬಾರದು, ಒತ್ತಾಯ ಇರಬಾರದು ಎನ್ನುತ್ತಾರೆ. ಇಂಗ್ಲಿಶ್ ಮಾಧ್ಯಮವನ್ನು ಯಾರಾದರು ಸ್ವಯಂ ಇಚ್ಛೆಯಿಂದ ತೆಗೆದುಕೊಳ್ಳುತ್ತೇವೆಂದರೆ ಅದಕ್ಕೆ ಅಡ್ಡಿ ಇರಬಾರದು, ಹಾಗೆಯೇ (ಉನ್ನತ ಶಿಕ್ಷಣದಲ್ಲಿ) ಕನ್ನಡ ಮಾಧ್ಯಮವನ್ನು ತೆಗೆದುಕೊಳ್ಳುತ್ತೀನಿ ಎನ್ನುವವರಿಗೆ ಅವಕಾಶವಿರಬೇಕು, ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳೂ ದೊರಕುವಂತಾಗಬೇಕೆಂಬುದು ಅವರ ಅಭಿಮತ.
ಅವರು ಕನ್ನಡ ಭಾಷೆ ಮತ್ತು ಕರ್ನಾಟಕವನ್ನು ಯಾವ ರೀತಿ ಕಾಣಬೇಕೆಂದಿದ್ದರು ಎನ್ನುವುದು ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಿ.ಲಿಟ್. ಕೊಡಮಾಡಲೆಣಿಸಿದಾಗ ಅವರು ವಿಧಿಸಿದ ಷರತ್ತುಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಿ.ಲಿಟ್. ಪ್ರಶಸ್ತಿಯನ್ನು ನೀಡಲು ೧೯೬೪ರಲ್ಲಿ ನಿರ್ಧರಿಸಿದಾಗ, ಅದನ್ನು ಅವರು ಪಡೆಯಲು ನಿರಾಕರಿಸಿದ್ದರು. ಏಕೆಂದರೆ ಯಾವ ಉದ್ದೇಶಕ್ಕಾಗಿ ಅವರಿಗೆ ಆ ಗೌರವ ಸಲ್ಲುತ್ತಿದೆಯೋ ಆ ಉದ್ದೇಶ ಇನ್ನೂ ಪರಿಪೂರ್ಣತೆಯನ್ನು ಸಾಧಿಸಿಲ್ಲ, ಅದು ಸಾಧಿತವಾದಾಗ ಇದನ್ನು ಧಾರವಾಡಕ್ಕೆ ಬಂದು ಸ್ವೀಕರಿಸಿದರೆ ಒಂದು ಅರ್ಥ ಇರುತ್ತದೆ ಎಂಬುದು ಅವರ ವಾದ. ಅವರ ಆಗಮನಕ್ಕೆ ಅವರು ನಾಲ್ಕು ಗುರುತರ ಉಪಾಧಿಗಳನ್ನು ಒಡ್ಡಿದ್ದರು: ೧. ಒಟ್ಟುಗೂಡಿದ ನಾಡಿನ ಹೆಸರು ಅಧಿಕೃತವಾಗಿ ಕರ್ಣಾಟಕ ಎಂದಾಗಬೇಕ; ೨. ಸರಕಾರ ಕನ್ನಡವನ್ನು ಅಧಿಕೃತಭಾಷೆಯೆಂದು ಘೋಷಿಸಬೇಕು; ೩. ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕವಾಗಬೇಕು; ಮತ್ತು ೪. ವಿಶ್ವವಿದ್ಯಾನಿಲಯದ ಮಟ್ಟದಲ್ಲಿ, ಸಧ್ಯಕ್ಕೆ ಇಂಗ್ಲೀಷಿನ ಜೊತೆಗೆ, ಪ್ರಾದೇಶಿಕ ಭಾಷೆಯೂ ಶಿಕ್ಷಣ ಮಾಧ್ಯಮವಾಗಬೇಕು. ಆದರೆ ಸತತವಾಗಿ ಎರಡು ವರ್ಷಗಳ ಕಾಲ ಕರ್ನಾಟಕ ವಿಶ್ವವಿದ್ಯಾಲಯದ ವೈಸ್-ಚಾನ್ಸಲರ್ ಡಾ. ಪಾವಟೆಯವರು ಅವರ ಮೇಲೆ ಒತ್ತಡ ಹೇರಿದ್ದರಿಂದ, ಮತ್ತು ಅವರ ಎರಡು ಮುಖ್ಯ ಉಪಾಧಿಗಳು (ಕನ್ನಡವನ್ನು ಕರ್ನಾಟಕದ ಅಧಿಕೃತ ಭಾಷೆಯಾಗಿ ಸರಕಾರ ಘೋಷಿಸಿದ್ದು ಮತ್ತು ಉನ್ನಡ ಶಿಕ್ಷಣದಲ್ಲಿ ಕನ್ನಡವನ್ನೂ ಶಿಕ್ಷಣ ಮಾಧ್ಯಮವಾಗಿ ಮಾಡುವುದು) ಬಹುತೇಕ ಈಡೇರಿದ್ದರಿಂದ ಅವರು ೧೯೬೬ರಲ್ಲಿ ಗೌರವ ಡಿ.ಲಿಟ್. ಸ್ವೀಕರಿಸುತ್ತಾರೆ (ಕುವೆಂಪು, ೨೦೦೪ಬಿ: ೩೫೮-೩೬೭).
ಈ ಷರತ್ತುಗಳನ್ನು ಗಮನಿಸಿದರೆ ಕನ್ನಡ ಭಾಷೆಯನ್ನು ಕುರಿತ ಅವರ ಮುಖ್ಯ ಕಾಳಜಿ, ಉನ್ನತ ಶಿಕ್ಷಣದಲ್ಲಿ ಕನ್ನಡವೂ ಶಿಕ್ಷಣ ಮಾಧ್ಯಮವಾಗಬೇಕೆಂದು, ಜೊತೆಗೆ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿರಬೇಕೆಂದು, ಎಂದು ಸ್ಪಷ್ಟವಾಗುವುದು. ಇನ್ನೆರೆಡು, ಮೈಸೂರು ಎನ್ನುವುದು ಹೋಗಿ ಕರ್ನಾಟಕ ಎಂದಾಗಬೇಕೆಂದು ಮತ್ತು ರಾಜ್ಯಪಾಲರ ನೇಮಕ ರಾಜ್ಯಾಂಗದ ಪ್ರಕಾರ ಆಗಬೇಕೆಂದು. ಕೊನೆಯ ಎರಡೂ ಆಪೇಕ್ಷೆಗಳು ಕರ್ನಾಟಕದ ಸ್ವರೂಪಕ್ಕೆ ಸಂಬಂಧಿಸಿದ್ದು. ಕುವೆಂಪುರವರಿಗೆ ಕರ್ನಾಟಕವು ಮೈಸೂರು ಎಂದಾಗಿರಬಾರದು ಮತ್ತು ಮೈಸೂರು ರಾಜರು ರಾಜ್ಯಪಾಲರಾಗಿರಬಾರದು, ಏಕೆಂದರೆ, ಈ ಎರಡೂ ಅಂಶಗಳು ಕರ್ನಾಟಕದ ರಾಜಪ್ರಭುತ್ವವನ್ನು ಪ್ರಜಾಪ್ರಭುತ್ವದ ಕಾಲದಲ್ಲೂ ಉಳಿಸಿಕೊಳ್ಳುವ ಪ್ರಯತ್ನವಾಗಿ ಅವರಿಗೆ ಕಂಡಿದೆ ಎನ್ನಿಸುತ್ತದೆ. ರಾಜರ ಕೃಪಾಕಟಾಕ್ಷದಲ್ಲಿದ್ದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರೂ, ಮೈಸೂರು ಮಹಾರಾಜರ ಪ್ರಗತಿಪರ ಚಟುವಟಿಕೆಗಳನ್ನು ಮೆಚ್ಚಿ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಒಂದು ಪ್ರಗಾಥವನ್ನು ರಚಿಸಿದ್ದರೂ, ಅವರು ಪ್ರಜಾಪ್ರಭುತ್ವದ ಪರವಾಗಿದ್ದವರಾಗಿದ್ದರು. ಆದ್ದರಿಂದ, ರಾಜಪ್ರಭುತ್ವದ ಪಳೆಯುಳಿಕೆಗಳು ಸಾಂಕೇತಿಕವಾಗಿಯೂ ಇಂದಿನ ಕರ್ನಾಟಕದಲ್ಲಿ ಇರಬಾರದೆಂಬುದು ಅವರ ಆದಮ್ಯ ಅಭಿಲಾಷೆ ಇದ್ದಂತೆ ಕಾಣುತ್ತದೆ.
ಬೆಂಗಳೂರು ವಿಶ್ವವಿದ್ಯಾಲಯ ನೀಡಿದ ಗೌರವ ಡಿ.ಲಿಟ್. ಪಡೆದಾಗ ಮಾಡಿದ ಭಾಷಣದಲ್ಲೂ ಅವರು ಕನ್ನಡವನ್ನು ಕುರಿತು ಮಾತನಾಡುತ್ತಾರೆ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಮನ್ನಣೆ, ಸಾರ್‍ವಜನಿಕ ಕ್ಷೇತ್ರದಲ್ಲಿ ಅದು ಸಾರ್‍ವಭೌಮ ಭಾಷೆಯಾಗಿರಬೇಕು, ಎಂದು ಅವರು ವಾದಿಸುತ್ತಾರೆ. ಅವರು ತಮ್ಮ ಮುಂದಿರುವ ಕರ್ತವ್ಯವಾಗಿ ಕಾಣುವುದು, ಇಂಗ್ಲಿಷನ್ನು ಬಲಾತ್ಕಾರದ ಸ್ಥಾನದಿಂದ ಐಚ್ಚಿಕಸ್ಥಾನಕ್ಕೆ ಇಳಿಸುವುದು (ಕುವೆಂಪು, ೨೦೦೪ಬಿ: ೩೮೭). ಅವರ ವಿರೋಧವಿರುವುದು ಬಲವಂತಕ್ಕೆ, ಇಂಗ್ಲಿಶ್ ಭಾಷೆಗಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ, ಅವರು ತ್ರಿಭಾಷಾ ಸೂತ್ರಕ್ಕೆ ಬಹು ವಿರೋಧಿಯಾಗಿದ್ದರು. ಅದಕ್ಕೆ ಮುಖ್ಯ ಕಾರಣ ಅವರ ಹಿಂದಿ ವಿರೋಧ. ಅವರು ಹಿಂದಿಯನ್ನು ಬಲಾತ್ಕಾರದಿಂದ ಹೇರುತ್ತಿದ್ದಾರೆ ಎನ್ನುವುದಕ್ಕೆ ವಿರೋಧ ತೋರುತ್ತಾರೆಯೇ ಹೊರತು ಆ ಭಾಷೆಯನ್ನು ಕುರಿತ ತಿರಸ್ಕಾರ ಅವರಲ್ಲಿ ಇರುವುದು ಕಂಡುಬರುವುದಿಲ್ಲ. ಅವರು ತ್ರಿಭಾಷಾ ಸೂತ್ರಕ್ಕೆ ವಿರುದ್ಧವಾಗಿ ಬಹುಭಾಷೆಗಳಲ್ಲಿ ದ್ವಿಭಾಷೆ ಎಂಬುದನ್ನು ಮುಂದಿಡುತ್ತಾರೆ (ಕುವೆಂಪು, ೨೦೦೪ಬಿ: ೫೩೪-೫೩೬). ಹೀಗೆ ೧೯೬೦ ಮತ್ತು ೭೦ರ ದಶಕದಲ್ಲಿ ಅವರು ಕನ್ನಡ ಮಾಧ್ಯಮ ಮತ್ತು ಕನ್ನಡ ಆಡಳಿತ ಭಾಷೆಯಾಗುವುದನ್ನು ಕುರಿತು ಹೆಚ್ಚು ಮೀಮಾಂಸೆ ನಡೆಸಿರುವುದು ಕಾಣುತ್ತದೆ.

ಕುವೆಂಪುರವರ ಕನ್ನಡ-ಕರ್ನಾಟಕ ಕುರಿತ ವಿಚಾರಗಳನ್ನು ಅವಲೋಕಿಸಿದಾಗ ಎದ್ದು ಕಾಣುವ ಅಂಶವೆಂದರೆ ಕನ್ನಡ-ಕರ್ನಾಟಕ ಕುರಿತ ಟಿoಟಿ-esseಟಿಣiಚಿಟisಣ ದೃಷ್ಟಿಕೋನ. ಅವುಗಳನ್ನು ಆತ್ಯಂತಿಕವಾಗಿ ನೋಡಲು ನಿರಾಕರಿಸುತ್ತಾರೆ. ಭಾಷೆಯ ವಿಚಾರವಾಗಿ ಅವರು ಮಾತನಾಡುವಾಗ ಮಾಡಿಕೊಳ್ಳುವ ಭಾವೋಪಯೋಗಿ ಮತ್ತು ಲೋಕೋಪಯೋಗಿ ಎನ್ನುವ ಬೇಧ ಇದನ್ನು ಸಮರ್ಥಿಸುತ್ತದೆ. ಅವರು ಕನ್ನಡವನ್ನು ಎತ್ತಿ ಹಿಡಿಯುವಾಗ ಎಲ್ಲೂ ಅದನ್ನು ಇತರ ಭಾಷೆಗಳ ವಿರುದ್ಧವಾಗಿ ನಿಲ್ಲದಂತೆ ನೋಡುತ್ತಾರೆ. ಇಂಗ್ಲಿಶ್‌ನ್ನು ಕುರಿತ ಅವರ ವಿಚಾರಗಳು ಅದನ್ನು ಶಿಕ್ಷಣ ಮಾಧ್ಯಮವಾಗಿ ಬಲತ್ಕಾರದಿಂದ ಹೇರುವುದರ ವಿರುದ್ಧವಾಗಿದೆಯೇ ಹೊರತು ಸ್ವ-ಇಚ್ಛೆಯಿಂದ ಆಯ್ಕೆ ಮಾಡಿಕೊಳ್ಳುವುದರ ವಿರುದ್ಧವಾಗಿಲ್ಲ. ಭಿನ್ನ ಭಾಷೆಗಳ eನ ಲೋಕೋಪಯೋಗಿಯಾಗಿರುವುದನ್ನು ಅವರು ಒಪ್ಪುತ್ತಾರೆ. ಬಹುಭಾಷೆಗಳಲ್ಲಿ ದ್ವಿಭಾಷೆ ಎಂದು ಅವರು ಹೇಳುವಾಗಲೂ ಯಾವ ಎರಡು ಭಾಷೆಗಳನ್ನು ಕಲಿಯಬೇಕೆಂದು ಆರಿಸಿಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗಿರಬೇಕೆನ್ನುತ್ತಾರೆ. ಭಾಷೆಗಳ ಆಯ್ಕೆ ಕೇವಲ ಕನ್ನಡ, ಇಂಗ್ಲಿಶ್ ಅಥವಾ ಹಿಂದಿಗೆ ಸೀಮಿತವಾಗಿರಬೇಕಾಗಿಲ್ಲ. ಅದು ರಷ್ಯನ್, ಜರ್ಮನ್, ಸಂಸ್ಕೃತ, ತೆಲುಗು, ತಮಿಳು ಯಾವುದು ಬೇಕಾದರು ಆಗಿರಬಹುದು.
ಈ ರೀತಿಯಾಗಿ ಕನ್ನಡವನ್ನು ಕನ್ನಡಪರವಾಗಿದ್ದೂ ಆತ್ಯಂತಿಕವಾಗಿ ನೋಡದಿರುವುದು; ಕನ್ನಡವನ್ನು ಇಂಗ್ಲಿಶ್ ವಿರೋಧಿಯಾಗಿಯೋ, ತಮಿಳು ವಿರೋಧಿಯಾಗಿಯೋ ನೋಡುತ್ತಿರುವ ಪ್ರಸ್ತುತದ ಭಾಷಾ ಹೋರಾಟಗಳ ಸಂದರ್ಭದಲ್ಲಿ, ಅವುಗಳ ಅನಾಹುತದ ಸಂದರ್ಭದಲ್ಲಿ ಬಹಳ ಮುಖ್ಯವಾದದ್ದು ಎಂದು ನನಗನ್ನಿಸುತ್ತದೆ. ತಮಿಳಿಗೆ ಕ್ಲಾಸಿಕಲ್ ಭಾಷೆಯ ಸ್ಥಾನ ಸಿಕ್ಕಾಗಷ್ಟೆ ಕನ್ನಡದ ಬಗ್ಗೆ ಮಾತನಾಡುವ ಈ ದಿನಗಳಲ್ಲಿ; ಕನ್ನಡದ ಚಲನಚಿತ್ರಗಳ ಉದ್ಧಾರ, ಬೇರೆ ಚಲನಚಿತ್ರಗಳನ್ನು ಜನರು ನೋಡದಿರುವಂತೆ, ಬಲತ್ಕಾರದಿಂದ ಮಾಡುವ ತಂತ್ರಗಳನ್ನು ಅನುಸರಿಸುವ ಪ್ರಸ್ತುತ ಸಂದರ್ಭದಲ್ಲಿ; ಕುವೆಂಪು ವಿಚಾರ ನನಗೆ ಆಪ್ಯಾಯಮಾನವಾಗಿ ಕಾಣುತ್ತದೆ. ಅನುಕರಿಸಬೇಕಾದ ವಿಚಾರವಾಗಿ ಕಾಣುತ್ತದೆ.
ಇನ್ನು ಅವರ ಕರ್ನಾಟಕ ಮೀಮಾಂಸೆಗೆ ಬಂದರೆ, ಅದನ್ನು ಭೌಗೋಳಿಕವಾಗಿ ನೋಡದೆ, ಭಾರತಾಂತರ್ಗತವಾಗಿ ನೋಡುವುದು ಆ ಕಾಲದ ಪ್ರಮುಖ ದ್ವಂದ್ವದ ಸಮರ್ಥಪರಿಹಾರವಾಗಿ ಕಾಣುತ್ತದೆ. ಅವುಗಳನ್ನು ನಾವು ಇಂದು ಭಿನ್ನ ನೆಲೆಯಲ್ಲಿ ನಿಂತು ಟೀಕಿಸಬಹುದು ಆದರೆ ಅದು ಬೇರೆ ಮಾತು. ರಾಷ್ಟ್ರೀಯತೆಯನ್ನು ವಸಾಹತು ವಿರೋಧಿಯಾಗಿ ನೋಡಿದರೂ, ಅದಕ್ಕೂ ಆಧುನಿಕ ವಿಚಾರಧಾರೆಗೂ ಅವರು ಮಾಡಿಕೊಳ್ಳುವ ವ್ಯತ್ಯಾಸ ಸಹ ಬಹಳ ಮುಖ್ಯವಾದದ್ದು ಎನ್ನಿಸುತ್ತದೆ. ವೈಚಾರಿಕತೆ, ಜಾತ್ಯತೀತತೆ, ಮತ-ವಿರೋಧ, ವಿeನ ಇವುಗಳ ಪರವಾದ ಆಧುನಿಕ ವಿಚಾರಧಾರೆ ಕುರಿತ ಅವರ ಅಚಲ ನಂಬಿಕೆ ಸಾಧ್ಯವಾಗುವುದು ಈ ಭಿನ್ನತೆಯನ್ನು ಅವರು ಪರಿಭಾವಿಸಿಕೊಳ್ಳುವುದರಿಂದಲೇ. ಹಾಗೆಯೇ ವಸಾಹತುಶಾಹಿ ಮತ್ತು ಇಂಗ್ಲಿಶ್‌ಭಾಷೆಯನ್ನು ಅವರು ಏಕತ್ರವಾಗಿ ನೋಡದೆ, ಬೇರ್ಪಡಿಸಿ, ವಸಾಹತುಶಾಹಿಯನ್ನು ವಿರೋಧಿಸುತ್ತಾ ಲೋಕೋಪಯೋಗಿ ಭಾಷೆಯಾಗಿ ಇಂಗ್ಲಿಶನ್ನು ಬೆಂಬಲಿಸುವುದು ಸಹ, ಆ ಸಂದರ್ಭದ ಆರೋಗ್ಯಕಾರಿ ಲಕ್ಷಣಗಳಲ್ಲಿ ಒಂದು ಎಂದು ಹೇಳಬಹುದು. ಏಕೆಂದರೆ, ವಸಾಹತುಶಾಹಿಗೆ ಪ್ರತಿಯಾಗಿ ಆಧುನಿಕತೆಯನ್ನು, ಇಂಗ್ಲಿಶ್‌ನ್ನು ತಿರಸ್ಕರಿಸುತ್ತಾರೆ; ಸನಾತನವಾದಕ್ಕೆ, ದೇಶಿವಾದಕ್ಕೆ ಕಟ್ಟುಬೀಳುವ ಅಪಾಯಗಳನ್ನು ಅವರು ತಪ್ಪಿಸಿಕೊಳ್ಳುತ್ತಾರೆ. ಇದರಿಂದಾಗಿಯೇ ಅವರು ಅನಿಕೇತನ, ವಿಶ್ವಮಾನವ ಕಲ್ಪನೆಗಳತ್ತ ಸಾಗುತ್ತಾರೆ. ಅವರ ಸಾಂಸ್ಕೃತಿಕ ಕರ್ನಾಟಕದ ಪರಿಕಲ್ಪನೆ, ಹೆಚ್ಚು ಸಾಹಿತ್ಯಮಯವಾಗಿದ್ದು, ಅವರ ಕನಸಿನ ಕರ್ನಾಟಕ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆಯೆಂಬುದನ್ನು ನೋಡಲಾರದೆ ರೂಪುಗೊಂಡ ಅಡಗುತಾಣವೇನೋ ಎಂಬ ಅನುಮಾನ ಕಾಡುತ್ತದೆ.


ನಲ್ಲಿ ಸಾಗುತ್ತದೆಯೆಂಬುದನ್ನು ನೋಡಲಾರದೆ ರೂಪುಗೊಂಡ ಅಡಗುತಾಣವೇನೋ ಎಂಬ ಅನುಮಾನ ಕಾಡುತ್ತದೆ.


Sunday, January 4, 2009

ಏನಿದು ಬ್ಲಾಗ್ ?

ಯಾಕೆ ಇಷ್ಟು ಕಷ್ಟದ ಹೆಸರು ಈ ಬ್ಲಾಗ್ಗೆ ಎಂದು ಯಾರಾದರು ಕೇಳಬಹುದು. ನಮ್ಮ ಬದುಕು ಮತ್ತು ವಿಚಾರಗಳು ಎಷ್ಟು ಸಂಕೀರ್ಣವಾಗಿದೆಯೋ ಅಷ್ಟೇ ಈ ಹೆಸರೂ ಸಂಕೀರ್ಣವಾಗಿದೆ. ತಿಳಿದಿರುವ ವಿಷಯಗಳು ಯಾವಾಗಲು ಸರಳವಾಗಿರುತ್ತವೆ. ತಿಳಿಯಬೇಕಾದ ವಿಚಾರಗಳು ಕ್ಲಿಷ್ಟವಾಗಿರುತ್ತವೆ. ನನಗೆ ತಿಳಿದಿರುವ ವಿಷಯಗಳನ್ನು ಹಂಚಿಕೊಳ್ಳುವುದು ಈ ಬ್ಲಾಗಿನ ಉದ್ದೇಶ.

My Blog List